Tuesday, July 5, 2022

Latest Posts

ರಾಜ್ಯಮಟ್ಟದ ಸಹಕಾರ ಭಾರತಿ ರಾಜ್ಯ ಅಧಿವೇಶನ ಉದ್ಘಾಟನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಸಹಕಾರ ಕ್ಷೇತ್ರದಲ್ಲಿ ಚಿನ್ನವನ್ನು ಕಬ್ಬಿಣ ಮಾಡುವವರು, ಕಬ್ಬಿಣವನ್ನೇ ಚಿನ್ನ ಮಾಡುವವರೂ ಇದ್ದಾರೆ. ಅವರುಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಇದನ್ನು ಸರಿಪಡಿಸಲು ಸಹಕಾರ ಕ್ಷೇತ್ರದ ಕಾನೂನು ಬಿಗಿ ಮಾಡಬೇಕಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸಹಕಾರ ಭಾರತಿ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಹಕಾರ ಭಾರತಿ ರಾಜ್ಯ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಮೋಸ, ವಂಚನೆ ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಮನೆ ಒಳಗೇ ಹೋಗುತ್ತಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಸಚಿವ ಸಂಪುಟದಲ್ಲಿ ಪ್ರಭಾವಿ ಖಾತೆಗಳನ್ನು ಪಡೆಯುತ್ತಾರೆ. ಆದರೆ ಪ್ರಾಮಾಣಿಕವಾಗಿ ಇರುವವರು ಏನೂ ಆಗುವುದಿಲ್ಲ ಎಂದು ವಿಷಾದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಆರ್ ಎಸ್ ಎಸ್‌ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ,
ಗೃಹ ಸಚಿವ ಆರಗ ಜ್ನಾನೇಂದ್ರ, ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ, ಪ್ರಮುಖರಾದ ಹುಲ್ಕುಳಿ ಮಹೇಶ್, ಉದಯ ಜೋಷಿ, ಎನ್.ಡಿ.ಠಾಕೂರ್, ವಿರೂಪಾಕ್ಷಪ್ಪ, ಯಡಗೆರೆ ಸುಬ್ರಹ್ಮಣ್ಯ, ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss