ಹೊಸ ದಿಗಂತ ವರದಿ, ಕೊಪ್ಪಳ :
ಆಟ ಎಂದರೆ ಕೇವಲ ಕ್ರಿಕೆಟ್ ಒಂದೇ ಎನ್ನುವಂತಾಗಿದೆ. ಜನ ಎಲ್ಲ ಕೆಲಸಗಳನ್ನು ಬಿಟ್ಟು ಟಿವಿ ಮುಂದೆ ಕೂಡುತ್ತಾರೆ. ಆದರೆ ನಮ್ಮ ಗ್ರಾಮೀಣ ಕ್ರಿಡೆಗಳಾದ ಲಗೋರಿ, ಚಿನ್ನಿದಾಂಡು, ಖೋಖೋ, ಕಬಡ್ಡಿಯಂತಹ ಆಟಗಳನ್ನು ಆಡಬೇಕು. ಒಳ್ಳೆಯ ಆರೋಗ್ಯಕ್ಕಾಗಿ ಕ್ರೀಡೆ ಬಹಳ ಮುಖ್ಯ. ಕ್ರೀಡಾಂಗಣ ಬಹಳಷ್ಟು ಇನ್ನೂ ಡೆವಲಪ್ ಆಗಬೇಕಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಶ್ರೀಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ರಾಜ್ಯಮಟ್ಟದ ಹಾರ್ಡ್ ಟೆನಿಸ್ ಕ್ರಿಕೆಟ್ ಪಂದ್ಯವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಒಳ್ಳೆಯ ಕ್ರೀಡಾಂಗಣ ಅಭಿವೃದ್ದಿ ನಮ್ಮ ಕನಸಾಗಿದೆ. ಕರೋನಾ ಕಾರಣದಿಂದ ಅನುದಾನ ಕಡಿಮೆ ಬಂದಿದೆ. ಸ್ಪೇಕ್ಟೇಟರ್ ಗ್ಯಾಲರಿ ಮಾಡಬೇಕಾಗಿದೆ ಮುಂದಿನ ಅವದಿಯಲ್ಲಿ ಅದನ್ನು ಪೂರ್ಣಗಿಳಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಪಂದ್ಯಾವಳಿಯನ್ನು ಉದ್ಘಾಟಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ಆಯೋಜಕರು ಮತ್ತು ಕ್ರೀಡಾಪಟುಗಳಿಗೆ ಶುಭ ಹಾರೈಸಿ ಆಟದಲ್ಲಿ ಸೋಲು ಗೆಲವು ಸಹಜ ಅದನ್ನು ಸ್ವೀಕರಿಸುವ ಮನಸ್ಥಿತಿ ಕ್ರೀಡಾಪಟುಗಳಿಗೆ ಇರಬೇಕು ಎಂದು ಹೇಳಿದರು.
ಸನ್ಮಾನ
ಆಯೋಜಕರ ವತಿಯಿಂದ ಎಸ್ಪಿ ಟಿ.ಶ್ರೀಧರ, ಶಾಸಕ ರಾಘವೇಂದ್ರ ಹಿಟ್ನಾಳ, ಕೆ.ಎಂ.ಸಯ್ಯದ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಮಾನ್ವಿ ಪಾಷಾ, ಸಾಧಿಕ್ ಅತ್ತಾರ್, ರಾಜು ನಾಯಕ್ ( ಕುಕನೂರು), ಸೇರಿದಂತೆ ಇತರರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಮಹೇಂದ್ರ ಕಿಂದ್ರೆ, ಕಾಟನ್ ಪಾಷಾ, ಗವಿಸಿದ್ದಪ್ಪ ಕರಡಿ, ಆದಿಲ್ ಪಟೇಲ್ ಶ್ರವಣಕುಮಾರ್, ಚಿಕನ್ ಪೀರಾ ಸೇರಿದಂತೆ ಇತರರು ವೇದಿಕೆಯ ಮೇಲಿದ್ದರು.
ಎರಡೇ ಬಾಲಿಗೆ ಔಟಾದ ಶಾಸಕ ಹಿಟ್ನಾಳ
ನಂತರ ನಡೆದ ಪೋಲಿಸರೊಂದಿಗಿನ ಪ್ರೆಂಡ್ಲಿ ಮ್ಯಾಚಿನಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಬ್ಯಾಟಿಂಗ್ ಮಾಡಲು ಪಿಚ್ಗೆ ಇಳಿದಿರು. ಬಹಳಷ್ಟು ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿದಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ವಿಶೇಷ ಆಸಕ್ತಿ ಇರುವ ಶಾಸಕ ರಾಘವೇಂದ್ರ ಹಿಟ್ನಾಳರ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಮೂಡಿತ್ತು. ಒಂದು ಬಾಲ್ನ್ನು ಎದುರಿಸಿದ ನಂತರ ಎರಡನೇ ಬಾಲ್ ನ್ನು ಎದುರಿಸುವ ವೇಳೆ ಬಾಲರ್ ಮಲ್ಲನಗೌಡರ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.