Tuesday, September 27, 2022

Latest Posts

ರಾಜ್ಯ ಉಪಚುನಾವಣೆ: ಗೆಲುವಿನ ಭವಿಷ್ಯ ಬಹಿರಂಗ ಪಡಿಸಿದ ಸಿ ವೋಟರ್ ಸಮೀಕ್ಷೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನ ಆರ್ ಆರ್ ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಗೆ ಸಂಬಂಧಪಟ್ಟಂತೆ ಸಿ ವೋಟರ್‌ ಚುನಾವಣೋತ್ತರ ಸಿ ವೋಟರ್ ಸಮೀಕ್ಷೆ ಬಹಿರಂಗವಾಗಿದೆ. ಆರ್ ಆರ್ ನಗರ ಹಾಗೂ ಶಿರಾದಲ್ಲೂ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಿ ವೋಟರ್ ತಿಳಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭೆಗೆ ಸಂಬಂಧಪಟ್ಟಂಥೆ ಬಿಜೆಪಿಯಿಂದ ಕಣದಲ್ಲಿರುವ ಮುನಿರತ್ನ ಅವರು ಶೇ. 37.8ರಷ್ಟು ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ, ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಶೇ. 31.1ರಷ್ಟು ಹಾಗೂ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಶೇ. 14ರಷ್ಟು ಮತ ಪಡೆಯಲಿದ್ದಾರೆ.
ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ ಅವರು ಶೇ. 36.6 ರಷ್ಟು ಮತ , ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ 32.5 ರಷ್ಟು ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಶೇ. 17.4 ರಷ್ಟು ಮತ ಪಡೆಯುವ ಸಾಧ್ಯತೆ ಇದೆ ಅಂತ ಸಿ ವೋಟರ್‌ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!