ಹೊಸ ದಿಗಂತ ವರದಿ, ತಿಪಟೂರು:
ರಾಜ್ಯ ಖೋ ಖೋ ಕ್ರೀಡಾ ಸಂಸ್ಥೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೊಧವಾಗಿ ತಿಪಟೂರಿನ ಪ್ರಸಿದ್ಧ ಕ್ರೀಡಾಪಟು ಹಾಗೂ
ನಿವೃತ್ತ ಎಸಿಪಿ ಲೋಕೇಶ್ವರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಲೋಕೇಶ್ವರ ವಿದ್ಯಾರ್ಥಿ ದೆಸೆಯಿಂದಲೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಹತ್ತು ಹಲವು ಪಾರಿತೋಷಕಗಳನ್ನು ಪಡೆದಿದ್ದಾರೆ. ಅಲ್ಲದೆ ಪೊಲೀಸ್ ಇಲಖೆ ಸೇರಿದ ಮೇಲೂ ಕ್ರೀಡೆಯ ಅವರ ಆಸಕ್ತಿ ಹೆಚ್ಚುತ್ತಲೆ ಇದ್ದು ತಿಪಟೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತೀವರ್ಷವೂ ರಾಜ್ಯಮಟ್ಟದ ಖೋಖೋ. ಕಬಡ್ಡಿ, ವಾಲಿಬಾಲ್, ಫುಟ್ಬಾಲ್ ಸೇರಿದಂತೆ ಓಟದ ಸ್ಪರ್ಧೆಗಳನ್ನು ಆಯೋಜಿಸುತ್ತಲೇ ಬಂದಿರುವುದನ್ನಿ ಇಲ್ಲಿ ಸ್ಮರಿಸಬಹುದು. ವೈಯಕ್ತಿಕವಾಗಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಲ್ಪತರು ನಾಡಿನ ಕೀರ್ತಿಯನ್ನು
ಎಲ್ಲೆಡೆ ವಿಜೃಂಬಿಸಿದ್ದು, ಇದೀಗ ರಾಜ್ಯ ಖೋಖೋ ಸಂಸ್ಥೆಗೆ ಅವಿರೋಧವಾಗಿ ಆಯ್ಕೆಯಾಗಿರುವುದಕ್ಕೆ ಅವರ ನೂರಾರು ಕ್ರೀಡಾಭಿಮಾನಿಗಳು ಲೋಕೇಶ್ವರ ಅವರನ್ನು ಅಭಿನಂದಿಸಿದ್ದಾರೆ.