Thursday, August 11, 2022

Latest Posts

ರಾಜ್ಯ ಗಾಲ್ಫ್ ಸಂಸ್ಥೆ ಅಧ್ಯಕ್ಷರಾಗಿ ವಿನೋದ್ ಚಿಣ್ಣಪ್ಪ ಮುಂದುವರಿಕೆ?

ಮಡಿಕೇರಿ: ಲಾಕ್‌ಡೌನ್ ನಿರ್ಬಂಧ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ರಾಜ್ಯ ಗಾಲ್ಫ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕೊಡಗಿನ ವಿನೋದ್ ಚಿಣ್ಣಪ್ಪ ಅವರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಮುಂದುವರಿಸಲು ಆಡಳಿತ ಮಂಡಳಿ ತೀರ್ಮಾನಿಸಿರುವುದಾಗಿ ಹೇಳಲಾಗಿದೆ.
ಏಪ್ರಿಲ್ ೧೯ ರಂದು ಹೊದ್ದೂರು ಗ್ರಾಮದ ವಾಟೆಕಾಡುವಿನಲ್ಲಿರುವ ರಿವರ್ ವ್ಯಾಲಿ ಬಂಗಲೋ ಹೋಂ ಸ್ಟೇಗೆ ಜಿಲ್ಲಾ ಅಪರಾಧ ಪತ್ತೆದಳ, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಮತ್ತು ಪಂಚಾಯಿತಿ ಅಧಿಕಾರಿಗಳ ವತಿಯಿಂದ ಬೀಗ ಜಡಿಯಲಾಗಿತ್ತು. ಹೋಂ ಸ್ಟೇಯಲ್ಲಿ ಲಾಕ್‌ಡೌನ್ ನಿರ್ಬಂಧವನ್ನು ಮೀರಿ ಮಾಲಕರಾದ ವಿನೋದ್ ಚಿಣ್ಣಪ್ಪ ಅವರು ತಮಗೆ ಬೇಕಾದ ಪರಿಚಯಸ್ಥರನ್ನು ಉಳಿಸಿಕೊಂಡಿದ್ದರು. ಬೆಂಗಳೂರಿನಿಂದ ಬಂದ ಮೂವರು ಪ್ರವಾಸಿಗರು ಹೋಂ ಸ್ಟೇ ಮಾಲಕರ ತಪ್ಪು ಮಾಹಿತಿ ಮೂಲಕ ಪೊಲೀಸರಿಂದ ಪಾಸ್ ಪಡೆದು ಬಂದಿದ್ದರು ಎನ್ನುವ ಆರೋಪ ಹೊರಿಸಲಾಗಿತ್ತು.
ಈ ಸಂಬಂಧ ಹೋಂ ಸ್ಟೇ ಮಾಲಕ ವಿನೋದ್ ಚಿಣ್ಣಪ್ಪ, ಬೆನಕ್ ಕುಮಾರ್, ಸಂದೀಪ್, ವಿನಯ್ ಹಾಗೂ ಇಬ್ಬರು ಮಹಿಳೆಯರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.
ವಿನೋದ್ ಚಿಣ್ಣಪ್ಪ ಹಾಕಿ ಆಟಗಾರರೂ ಆಗಿದ್ದು, ಬೆಂಗಳೂರಿನ ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಅಧ್ಯಕ್ಷರೂ, ಕಸ್ಟಮ್ಸ್ ಅಧಿಕಾರಿಯೂ ಆಗಿದ್ದಾರೆ. ಹೋಂ ಸ್ಟೇ ಪ್ರಕರಣದ ಬಳಿಕ ಕೆಜಿಎ ಆಡಳಿತ ಮಂಡಳಿ ನೋಟೀಸ್ ಜಾರಿ ಮಾಡಿ ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎನ್ನುವ ಕುರಿತು ವಿವರಣೆ ಕೇಳಿತ್ತು.
ಆದರೆ ಇದೀಗ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೈಬಿಡುವ ಬಗ್ಗೆ ನಡೆಸಲಾಗಿದ್ದ ಚರ್ಚೆ ಅಂತ್ಯ ಕಂಡಿದ್ದು, ವಿನೋದ್ ಚಿಣ್ಣಪ್ಪ ಅವರ ವಿರುದ್ಧ ಕೇವಲ ಪ್ರಥಮ ವರ್ತಮಾನ ವರದಿ ಮಾತ್ರ ದಾಖಲಾಗಿದೆಯೇ ಹೊರತು ಚಾರ್ಜ್‌ಶೀಟ್ ಮಾಡಿಲ್ಲದಿರುವುದರಿಂದ ಅವರ ವಿರುದ್ಧದ ಕ್ರಮವನ್ನು ಆಡಳಿತ ಮಂಡಳಿ ಕೈಬಿಟ್ಟಿರುವುದಾಗಿ ಹೇಳಲಾಗಿದೆ. ಕೆಜಿಎ ಆಡಳಿತ ಸಮಿತಿಯಲ್ಲಿ ಡಿಜಿಪಿ ಪ್ರವೀಣ್ ಸೂದ್ ಸೇರಿದಂತೆ ಅನೇಕ ಪ್ರಮುಖರು ಇರುವುದು ಇಲ್ಲಿ ಗಮನಾರ್ಹ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss