Wednesday, August 10, 2022

Latest Posts

ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ಸಂಪುಟ ವಿಸ್ತರಣೆ ದೊಡ್ಡ ಸವಾಲು

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿಗೆ ಇದೀಗ ಸಂಪುಟ ವಿಸ್ತರಣೆಯೊಂದು ದೊಡ್ಡ ಸವಾಲಾಗಿದ್ದು, ಸಂಪುಟ ಪುನಾರಚನೆಯೋ? ಸಂಪುಟ ವಿಸ್ತರಣೆಯೋ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅತೃಪ್ತ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಖಾಲಿ ಇರುವ 7 ಸ್ಥಾನಗಳಿಗೆ ನೂತನ ಸಚಿವರ ನೇಮಕ ಮಾಡಬೇಕಿದೆ.

ಬಿಜೆಪಿಗೆ ಈಗಾಗಲೇ ಕಾಂಗ್ರೆಸ್-ಜೆಡಿಎಸ್ ನ ಬಂಡಾಯ ಶಾಸಕರು ಸೇರಿದಂತೆ ಬಿಜೆಪಿ ಶಾಸಕರೂ ಇದ್ದಾರೆ. ಎಂಟಿಬಿ ನಾಗರಾಜ್, ಮುನಿರತ್ನ, ಆರ್ ಶಂಕರ್, ಎಚ್ ವಿಶ್ವನಾಥ್, ಸಿಜೆ ಯೋಗೇಶ್ವರ, ಸುನೀಲ್ ಕುಮಾರ್, ಎಸ್ ಎ ರಮದಾಸ್, ಅಪ್ಪಾಚು ರಂಜನ್, ಉಮೇಶ್ ಕಟ್ಟಿ, ಮುರುಗೇಶ್ ನಿರಣಿ, ಅರವಿಂದ್ ಲಿಂಬಾವಳಿ, ಎಸ್ ಅಂಗರ ಸೇರಿದಂತೆ ಮುಂತಾದ ಬಿಜೆಪಿ ಸದಸ್ಯರು ಮಂತ್ರಿ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಲಹೆಗಳೊಂದಿಗೆ, ಯಡಿಯೂರಪ್ಪ ಅವರು ಅಧಿಕಾರಿಗಳು ಮತ್ತು ನಿಗಮಗಳಿಗೆ ಕಾರ್ಯಕರ್ತರನ್ನು ನೇಮಿಸುವ ಸಾಧ್ಯತೆಯಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss