Wednesday, June 29, 2022

Latest Posts

ರಾಜ್ಯ ರಾಜಧಾನಿಯನ್ನು ಕಾಡುತ್ತಿದೆ ಹೈಬ್ರೀಡ್ ಕೊರೋನಾ: ಮತ್ತೆ ಮೂವರಲ್ಲಿ ವೈರಸ್ ದೃಢ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹೈಬ್ರೀಡ್ ಕೊರೋನಾಗೆ ರಾಜ್ಯವು ತತ್ತರಿಸಿದ್ದು, ಇದೀಗ ಮತ್ತೆ ಮೂವರಿಗೆ ವೈರಸ್ ದೃಢಪಟ್ಟಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ದೇಶದ ನಾಲ್ವರಿಗೆ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಲ್ಲಿ ರಾಜ್ಯದ ಮೂವರಿಗೆ ತಗುಲಿದ್ದು, ಇವರು ಬೆಂಗಳೂರು ಮೂಲದವರು.
ಈಗಾಗಲೇ ರಾಜ್ಯ ರಾಜಧಾನಿ ಹಾಗೂ ಶಿವಮೊಗ್ಗ ಸೇರಿದಂತೆ 7 ಜನರಿಗೆ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿದ್ದನ್ನು ಐಸಿಎಂಆರ್ ವರದಿಯಿಂದ ದೃಢಪಟ್ಟಿತ್ತು. ಇದೀಗ ಇಂದು ಮತ್ತೆ ಮೂವರಿಗೆ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss