ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಸರ್ಕಾರ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆ ಪ್ರಕಾರ 2021ನೇ ಸಾಲಿಗೆ 20 ಸಾರ್ವತ್ರಿಕ ರಜಾದಿನಗಳನ್ನು ಸರ್ಕಾರ ಘೋಷಿಸಿದೆ.
ಸರ್ಕಾರದ ಆದೇಶದಂತೆ, 2021ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯು ಜನವರಿ 14ರ ಮಕರ ಸಂಕ್ರಾಂತಿಯಿಂದ ಆರಂಭವಾಗಿ ನವೆಂಬರ್ 22ರ ಕನಕದಾಸ ಜಯಂತಿಗೆ ಮುಕ್ತಾಯಗೊಳ್ಳಲಿದೆ.
ಮುಖ್ಯವಾಗಿ , ಗಣರಾಜ್ಯೋತ್ಸವ, ಮಹಾಶಿವರಾತ್ರಿ, ಗುಡ್ಫ್ರೈಡೇ, ಯುಗಾದಿ, ಅಂಬೇಡ್ಕರ್ ಜಯಂತಿ, ಕಾರ್ಮಿಕರ ದಿನಾಚರಣೆ, ಬಸವ ಜಯಂತಿ, ಅಕ್ಷಯ ತೃತೀಯ, ರಮ್ಜಾನ್, ಬಕ್ರೀದ್, ಮೊಹರಂ, ವರಸಿದ್ಧಿ ವಿನಾಯಕ ವ್ರತ, ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಆಯುಧಪೂಜೆ, ವಿಜಯದಶಮಿ, ವಾಲ್ಮೀಕಿ ಜಯಂತಿ, ಈದ್ ಮಿಲಾದ್, ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ, ಬಲಿಪಾಡ್ಯಮಿ, ದೀಪಾವಳಿ ರಜೆಗಳು ಈ ಪಟ್ಟಿಯಲ್ಲಿವೆ.
ಆದರೆ ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಹಾವೀರ ಜಯಂತಿ, ಸ್ವಾತಂತ್ರ್ಯೋತ್ಸವ, ಕ್ರಿಸ್ಮಸ್ ರಜೆಗಳಿಲ್ಲ. ಮಹಾವೀರ ಜಯಂತಿ( ಏಪ್ರಿಲ್ 25) ಹಾಗೂ ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಎರಡೂ ಭಾನುವಾರದಂದು ಮತ್ತು ಕ್ರಿಸ್ಮಸ್ ರಜಾದಿನವಾದ ನಾಲ್ಕನೇ ಶನಿವಾರದಂದು ಬರುವುದರಿಂದ ಅವುಗಳನ್ನು ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ.