ಬೆಂಗಳೂರು: ಗುರುವಾರ ರಾಜ್ಯದ ರೈತರಿಗೆ 137 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದರು, ಅದರ ಬೆನ್ನಲ್ಲೇ ಇಂದು ಮತ್ತೆ 500 ಕೋಟಿಯ ಹೊಸ ಪ್ಯಾಕೇಜ್ ಘೋಷಿಸಿದ್ದಾರೆ.
ರಾಜ್ಯದಲ್ಲಿನ 10 ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ.ಗಳಂತೆ 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
40,250 ಆಶಾ ಕಾರ್ಯಕರ್ತರಿಗೆ ತಲಾ 3 ಸಾವಿರ ರೂ.ಗಳಂತೆ 12.5 ಕೋಟಿ ರೂ. ಪ್ಯಾಕೇಜ್
ಅಪಘಾತದಿಂದ ಮೃತಪಟ್ಟ ಕುರಿ, ಮೇಕೆಗೆ 5 ಸಾವಿರ ರೂ. ಪರಿಹಾರ ಕೊಡುವ ಯೊಜನೆ ಮುಂದುವರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಪರಿಹಾರವಾಗಿ ಸರ್ಕಾರ 1,610 ಕೋಟಿ ರೂ., ಎರಡನೇ ಹಂತದಲ್ಲಿ 162 ಕೋಟಿ ರೂ., ಮೂರನೇ ಹಂತದಲ್ಲಿ 512.5 ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಘೋಷಿಸಿದೆ.
ಕೊರೋನಾ ಲಾಕ್ ಡೌನ್ ಪರಿಣಾಮದಿಂದ ರಾಜ್ಯದಲ್ಲಿ ತತ್ತರಿಸಿದವರ ವಿವಿಧ ವರ್ಗಕ್ಕೆ ಸರ್ಕಾರ ಒಟ್ಟಾರೆ 2,284 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದೆ.
ಮೇ 17 ರ ನಂತರ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಲವಾರು ವಿನಾಯಿತಿಗಳನ್ನು ನೀಡುವ ನಿರೀಕ್ಷೆಯಿದೆ. ತಾರಾ ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ, ಮಾಲ್, ಹವಾನಿಯಂತ್ರಿತ ವ್ಯವಸ್ಥೆಗಳನ್ನು ಹೊರತುಪಡಿಸಿ ಷರತ್ತುಬದ್ದವಾಗಿ ರಾಜ್ಯಗಳಿಗೆ ಬಹುತೇಕ ಲಾಕ್ ಡೌನ್ ಸಡಿಲ ಮಾಡುವ ಸಾಧ್ಯತೆಗಳಿವೆ ಎಂದರು.
ಮುಖ್ಯಮಂತ್ರಿ ಮಾತು: ಎಪಿಎಂಸಿ ಕಾಯ್ದೆ ಬಗ್ಗೆ ತಪ್ಪು ಕಲ್ಪನೆ ಬೇಡ. ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಈಡೇರಿಸಲು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ ತರಲಾಗಿದೆ. ಎಪಿಎಂಸಿ ಪ್ರಾಂಗಣ ಮಾತ್ರವಲ್ಲದೆ, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಿದ್ದರೂ ಮಾರಾಟ ಮಾಡಲು ಅವಕಾಶ, ಸ್ವಾತಂತ್ರ್ಯ ಸಿಗಲಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತರಿಗೆ ಮೋಸ ಮಾಡುವವನು ನಾನಲ್ಲ ಎಂದು ಹೇಳಿದ್ದಾರೆ.