ಹೊಸ ದಿಗಂತ ವರದಿ, ಮಂಡ್ಯ :
ಪ್ರೀತಿಸಿ ಮದುವೆ, ಮತಾಂತರ ಮಾಡಿಕೊಂಡ ಸ್ವಲ್ಪ ದಿನಗಳ ಕಾಲ ಜೊತೆಗಿದ್ದು, ನಂತರ ಬೇರೊಬ್ಬಳನ್ನು ಮದುವೆ ಮಾಡಿಕೊಳ್ಳುವುದು ಪ್ರೀತಿಯೇ? ಇಂತಹ ಕ್ರಮಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಲವ್ ಜಿಹಾದ್ಗೆ ನಿಷೇಧ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.
ಕೆ.ಆರ್. ಪೇಟೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಜಯ್ಮಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬ ಮುಸ್ಲೀಂ ಹುಡುಗ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾದರೆ ಒಂದು ಲಕ್ಷ ರೂ. ಕೊಡುತ್ತಾರೆ. ಇಬ್ಬರು ಹಿಂದೂ ಹುಡುಗಿಯರನ್ನು ಮದುವೆಯಾದರೆ ೩ ಲಕ್ಷ ಕೊಡುತ್ತಾರೆ. ಇದು ಪ್ರೇಮ ವಿವಾಹನಾ ಎಂದು ಅವರು ಪ್ರಶ್ನಿಸಿದರು.
ಮದುವೆಯಾಗಿ ಮತಾಂತರ ಮಾಡಿಸಿ ಸ್ವಲ್ಪ ದಿನ ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅದನ್ನು ಲವ್ ಎನ್ನಬೇಕಾ? ಇದು ಲವ್ ಅಲ್ಲ, ಲವ್ವೋ, ಡವ್ವೋ ಎಂದು ಸಿದ್ದರಾಮಯ್ಯನವರೇ ಹೇಳಬೇಕೆಂದು ಟಾಂಗ್ ನೀಡಿದರು.
ಮಂಡ್ಯದಲ್ಲಿ ಲವ್ ಜಿಹಾದ್ ನಡೆಯಲು ಸಾಧ್ಯವೇ? ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಇದು ಮಂಡ್ಯದ ಗುಣ. ಇಂತಹ ಗುಣ ಎಲ್ಲ ಕಡೆಯೂ ಇರಬೇಕು ಎಂಬ ಉದ್ದೇ ಶದಿಂದ ಲವ್ ಜಿಹಾದ್ ನಿಷೇಧಿಸಲು ಹೊರಟಿದ್ದೇವೆ ಎಂದು ಅಶೋಕ್ ತಿಳಿಸಿದರು.