Monday, August 8, 2022

Latest Posts

ರಾಜ್ಯ ಸರ್ಕಾರದ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಹ್ವಾನ

ಧಾರವಾಡ: ರಾಜ್ಯ ಸರ್ಕಾರದ ಆತ್ಮ ಯೋಜನೆಯಡಿ ಕೃಷಿ ವಲಯದಲ್ಲಿ ವಿವಿಧ ವಿಭಾಗಗಳಲ್ಲಿ ತಮ್ಮದಾದ ಅಮೂಲ್ಯ ಅನ್ವೇಷಣೆ, ವಿಶಿಷ್ಟ ಸಾಧನೆ ಮೂಲಕ ರೈತ ಸಮುದಾಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಜಿಲ್ಲೆಯ ಪರಿಣಿತ ಕೃಷಿಕ ಮಹನೀಯರನ್ನು ಗುರುತಿಸಿ ಶ್ರೇಷ್ಠ ಕೃಷಿಕ ಪ್ರಶಸ್ತಿ, ನಗದು ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ.

2020-21ನೇ ಸಾಲಿನ ಧಾರವಾಡ ಜಿಲ್ಲೆಯ ರೈತರಿಂದ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಉದ್ಯಮಿಗಳ ಗುಂಪು ಪ್ರತಿನಿಧಿಸುವ ಒಂದು ಗುಣಾತ್ಮಕ ಹಾಗೂ ಸಂಘಟನಾತ್ಮಕ ಗುಂಪು ಪ್ರಶಸ್ತಿಗೆ ಆಹ್ವಾನಿಸಿದೆ.

ರೈತರು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರ ಕಚೇರಿಯಿಂದ ಅರ್ಜಿ ಪಡೆದು ಸಾಧನೆಗಳ ವಿವರ ಬರೆದು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸೆ.೭ರೊಳಗಾಗಿ ಸಲ್ಲಿಸಬೇಕು. ಈಗಾಗಲೆ ಈ ಪ್ರಶಸ್ತಿ ಪಡೆದವರು, ಸಮಾನಾಂತರ ಪ್ರಶಸಿ ಪಡೆದವರ ಅರ್ಜಿ ಪರಿಗಣಿಸುವುದಿಲ್ಲ.

ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಉಪ ಕೃಷಿ ನಿರ್ದೇಶಕರು ಹಾಗೂ ಆತ್ಮ ಯೋಜನೆ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss