Monday, August 15, 2022

Latest Posts

ರಾಜ್ಯ ಸರ್ಕಾರ ದಿವಾಳಿ ಆಗಿದೆ: ಶಾಸಕ ಎಂ.ಬಿ. ಪಾಟೀಲ್ ಆರೋಪ

ವಿಜಯಪುರ: ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿ ಮಾಡಲು ಹಣವಿಲ್ಲದೇ ದಿವಾಳಿ ಆಗಿದೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಅಭಿವೃದ್ಧಿಗೂ ರಾಜ್ಯ ಸರ್ಕಾರದಲ್ಲಿ ಹಣವಿಲ್ಲದೇ ದಿವಾಳಿ ಆಗಿದೆ ಎಂದರು.

ಅಲ್ಲದೆ ನನ್ನ ಮತಕ್ಷೇತ್ರಕ್ಕೆ ಬರುವ ಎರಡು ಅನುದಾನವನ್ನು ಕೂಡ ಸಿಎಂ ಬಿ.ಎಸ್. ಯಡಿಯೂರಪ್ಪ ತಡೆಹಿಡಿದ್ದಾರೆ ಎಂದು ದೂರಿದರು.

ಕೆಲವು ಮಹಾನುಬಾವರು ಮತ್ತು ಪುಣ್ಯಾತ್ಮರು 10 ಸಾವಿರ, 20 ಸಾವಿರ ಕೋಟಿ ನೀರಾವರಿಗೆ ಅನುದಾನ ನೀಡುತ್ತೇವೆ ಎಂದಿದ್ದಾರೆ. ಅವರು ಏನು ಮಾಡ್ತಾರೇ ನೋಡುತ್ತೇನೆಂದು ಎಂದು ಪರೋಕ್ಷವಾಗಿ ನೀರಾವರಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ಮಾಡಿದರು.

ಇನ್ನು ಜನವರಿಯಲ್ಲಿ ಸರ್ಕಾರದ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡ್ತೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss