Thursday, August 11, 2022

Latest Posts

ರಾಜ್ಯ ಸಾರಿಗೆ ಇಲಾಖೆಯ‌ ನಾಲ್ಕು ನಿಗಮದಿಂದ ಹೊರರಾಜ್ಯಗಳಿಗೆ ಬಸ್ ಸಂಚಾರ ಆರಂಭ: ಡಿಸಿಎಂ ಲಕ್ಷ್ಮಣ ಸವದಿ

ಬಾಗಲಕೋಟೆ: ಇನ್ನೆರಡು‌‌ ದಿನದಲ್ಲಿ ಹೊರರಾಜ್ಯಗಳಿಗೆ ರಾಜ್ಯ ಸಾರಿಗೆ ಇಲಾಖೆಯ‌ ನಾಲ್ಕು ನಿಗಮದಿಂದ‌ ಹೊರರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಮಿಳುನಾಡ,ಆಂದ್ರಪ್ರದೇಶ,ತೆಲಂಗಾಣ,ಗೋವಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು ಈಗಾಗಲೇ ಆಂದ್ರಪ್ರದೇಶದಿಂದ ಪತ್ರಕ್ಕೆ ಒಪ್ಪಿಗೆ ನೀಡಲಾಗಿದೆ.ಉಳಿದ‌ ರಾಜ್ಯಗಳಿಂದ ಒಪ್ಪಿಗೆ ಬಂದ ತಕ್ಷಣವೇ ಬಸ್ ಸಂಚಾರ ನಡೆಸಲಾಗುವುದು.ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯ ಗಳಿಗೆ ಬಸ್ ಓಡಿಸಲಾಗುವುದು ಎಂದರು.
ಕೋವಿಡ್-19 ದಿಂದ ರಾಜ್ಯದಲ್ಲಿ ಯಾವುದಾದರೂ ಹೆಚ್ಚು ಹಾನಿಯಾದ ಇಲಾಖೆ ಇದ್ದರೆ ಅದು ಸಾರಿಗೆ ಇಲಾಖೆಯಾಗಿದೆ.ಪ್ರತಿದಿನ ಹಿಂದೆ ಒಂದು ಕೋಟಿಯಷ್ಟು ಜನ ಸಂಚಾರ ಮಾಡುತ್ತಿದ್ದರು. ಆದರೆ ಈಗ ನಿತ್ಯ ೧೫ ಲಕ್ಷ ಜನ ಪ್ರಯಾಣಿಕರು ಮಾತ್ರ ಬರುತ್ತಿದ್ದಾರೆ.ಸಾಮಾಜಿಕ ಅಂತರ‌ಕಾಯ್ದುಕೊಂಡು ಬಸ್ ಓಡಿಸುತ್ತಿರುವುದರಿಂದ‌ಹತ್ತು ಹದಿನೈದು ಪ್ರಯಾಣಿಕರು ಬಸ್ ದಲ್ಲಿ ಬರುತ್ತಿದ್ದಾರೆ ಎಂದರು.
ಸಾರಿಗೆ ಇಲಾಖೆ‌ಯಲ್ಲಿ 1,30 ,000 ಸಿಬ್ಬಂದಿ ಇದ್ದು ಎಲ್ಲರ‌ಸಂಬಳ ನೀಡಲಾಗಿದೆ.ಯಾರದೂ ಕಡಿತ‌ಮಾಡಿಲ್ಲ.ಇನ್ನೂ ಕೊರೋನಾದಿಂದ ಸಾರಿಗೆ ಇಲಾಖೆಗೆ 2300 ಕೋಟಿಯಷ್ಟು ಹಾನಿ ಸಂಭವಿಸಿದೆ ಎಂದು ಹೇಳಿದರು.
ಡಿಸಿಎಂ ಕಾರಜೋಳ,ಸಂಸದ ಪಿ.ಸಿ.ಗದ್ದಿಗೌಡರ,ವಿ.ಪ.ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss