Sunday, August 14, 2022

Latest Posts

ರಾಜ್ ಕಪೂರ್, ದಿಲೀಪ್ ಕುಮಾರ್ ಅವರ ‘ಹವೇಲಿ’ಗಳ ಖರೀದಿಗೆ ಮುಂದಾದ ಪಾಕಿಸ್ತಾನ ಸರಕಾರ

ಪೇಶಾವರ: ಬಾಲಿವುಡ್ ದಿಗ್ಗಜರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ‘ಹವೇಲಿ’ಗಳನ್ನು ಖರೀದಿಸಲು ಪಾಕಿಸ್ತಾನದ ಖೈಬರ್ ಪಖ್ತೂನ್ ಖವಾದ ಸ್ಥಳೀಯ ಸರ್ಕಾರ ಮುಂದಾಗಿದೆ.
ಈ ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ಅಪಾಯದ ಹಂತ ತಲುಪಿದೆ. ಹೀಗಾಗಿ ಈ ಮನೆಗಳನ್ನು ರಕ್ಷಿಸಿ ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡು ಕಟ್ಟಡಗಳನ್ನು ಖರೀದಿಸಲು ಅಗತ್ಯವಾದ ಹಣಕಾಸು ಬಿಡುಗಡೆಗೆ ನಿರ್ಧರಿಸಲಾಗಿದ್ದು, ಎಷ್ಟು ವೆಚ್ಚ ತಗಲಬಹುದು ಎಂಬ ಬಗ್ಗೆ ಮಾಹಿತಿ ನೀಡುವಂತೆ ಪೇಶಾವರದ ಡೆಪ್ಯುಟಿ ಕಮಿಷನರ್ ಗೆ ಈಗಾಗಲೇ ಪತ್ರ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಕಪೂರ್ ಹವೇಲಿ’
ನಟ ರಾಜ್ ಕಪೂರ್ ಅವರ ಪೂರ್ವಜರ ಮನೆಯಾಗಿರುವ ‘ಕಪೂರ್ ಹವೇಲಿ’ಯನ್ನು 1918 ಮತ್ತು 1922ರ ನಡುವೆ ಕಪೂರ್ ಅಜ್ಜ ದೀವಾನ್ ಬಾಶೇವರ್ನಾಥ್ ಕಪೂರ್ ಕಟ್ಟಿಸಿದ್ದರು. ಇದೇ ಸ್ಥಳದಲ್ಲಿ ಇನ್ನೋರ್ವ ನಟ ದಿಲೀಪ್ ಕುಮಾರ್ ಗೆ ಸೇರಿದ ಕಟ್ಟಡವೂ ಇದೆ. ಇದು ಕೂಡಾ ನೂರು ವರ್ಷ ಪೂರೈಸಿದ್ದು, ೨೦೧೪ರಲ್ಲಿ ಇದನ್ನು ರಾಷ್ಟ್ರೀಯ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss