Monday, July 4, 2022

Latest Posts

ರಾಜ ವಂಶಸ್ಥ ಯದುವೀರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ!

ಹೊಸ ದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದಿದ್ದು, ಈ ಸಂಬಂಧ ಯದುವೀರ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ಮೈಸೂರು ರಾಜವಂಶಸ್ಥ ಯದುವೀರ್ ಚಾಮರಾಜ ಒಡೆಯರ್ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಪೋಸ್ಟ್ ಮಾಡಲಾಗಿದೆ.

ಆ ಪೋಸ್ಟ್ ನಲ್ಲಿ ನಾವು ರೈತರ ಪರವಾಗಿದ್ದೇವೆ. ರೈತರನ್ನು ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನು ಈಗಾಗಲಾದರೂ ಬಗೆಹರಿಸಿ’ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವಿಟ್‌ನ್ನು ಕೃಷಿ ಕಾಯ್ದೆ ವಿರೋಧಿಗಳು ಸಹ ಶೇರ್ ಮಾಡಿಕೊಂಡು, ತಮ್ಮ ಖಾತೆಗೆ ರೀ ಪೋಸ್ಟ್ ಮಾಡುತ್ತಿದ್ದಾರೆ.

ಯದುವೀರ್ ಅವರ ಹೆಸರಿನಲ್ಲಿ ಇರುವ ಈ ಪೋಸ್ಟ್ಗೆ ಸಹಸ್ರಾರು ಪರ-ವಿರೋಧ ಕಮೆಂಟ್‌ಗಳು ಬಂದಿವೆ. ಆದರೆ ಅಸಲಿಯತ್ತು ಬೇರೆಯಾಗಿದೆ. ಈ ಟ್ವೀಟ್ ಕಂಡು ಸ್ವತಹ ಯದುವೀರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಟ್ವಿಟರ್ ಖಾತೆ ನನ್ನದಲ್ಲ. ನನ್ನ ಹೆಸರು ಹಾಗೂ ಭಾವಚಿತ್ರ ಬಳಸಿ ಯಾರೋ ಖಾತೆ ತೆರೆದಿದ್ದಾರೆ. ಪೋಸ್ಟ್ ಕೂಡ ಮಾಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬ0ಧವಿಲ್ಲ. ಈ ಬಗ್ಗೆ ನಾನು ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

ಪದೇ ಪದೆ ನಕಲಿ ಖಾತೆಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ಯಾರು ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss