Thursday, August 11, 2022

Latest Posts

ರಾತ್ರಿಯಿಡೀ ಸುಖನಿದ್ದೆಗೆ ಗೊರಕೆ ಅಡ್ಡವಾಗುತ್ತಿದೆಯೇ? ಗೊರಕೆ ಎಂದರೇನು? ಅದನ್ನು ಹೋಗಲಾಡಿಸುವುದು ಹೇಗೆ?

ರಾತ್ರಿ ಒಳ್ಳೆಯ ನಿದ್ದೆಗೆ ಏನೆಲ್ಲ ಅವಶ್ಯಕ? ಓಳ್ಳೆಯ ಹಾಸಿಗೆ,ದಿಂಬು, ಕತ್ತಲು ಯಾವುದೇ ಶಬ್ದ ಇಲ್ಲದಿರುವುದು. ಆದರೆ ಗೊರಕೆ ಹೊಡೆಯುವವರ ಪಕ್ಕ ಎಂದಾದರೂ ಮಲಗಿದ್ದೀರಾ? ನಿದ್ದೆ ಮಾಡುವುದು ಅಸಾಧ್ಯ. ಆದರೆ ಈ ಗೊರಕೆ ಏಕೆ ಬರುತ್ತದೆ? ಇದನ್ನು ಹೋಗಲಾಡಿಸುವುದು ಹೇಗೆ?
ಉಸಿರಾಟ ವ್ಯವಸ್ಥೆಯಲ್ಲಿ ಆಗುವ ಕಂಪನ ಇದಾಗಿದೆ. ಕಿರುನಾಲಗೆ ಹಾಗೂ ಮೃದು ಅಂಗುಳಿನ ಹಿಂಭಾಗದಲ್ಲಿ ಅನಿಯಮಿತವಾದ ಗಾಳಿ ಚಲನೆಯಿಂದ ನಡುವಿನನಾಳದಲ್ಲಿ ಅಡಚಣೆ ಉಂಟಾಗಿ ಗೊರಕೆ ಶಬ್ದ ಹೊಮ್ಮುತ್ತದೆ. ಗೊರಕೆ ಅಂತ ದೊಡ್ಡ ಸಮಸ್ಯೆ ಅಲ್ಲ ಎಂದು ಜನ ಸುಮ್ಮನಾಗುತ್ತಾರೆ. ಆದರೆ ಅಮೆರಿಕಾದಲ್ಲಿ ಹೆಂಡತಿಯೊಬ್ಬಳು, ತನ್ನ ಗಂಡ ಗೊರಕೆ ಹೊಡೆಯುತ್ತಾನೆ ನಿದ್ದೆ ಮಾಡಲು ಆಗುವುದಿಲ್ಲ ಎಂದು ಅವನಿಗೆ ವಿಚ್ಛೇದನ ನೀಡಿದ್ದಾಳೆ. ಹಾಗಾದರೆ ಈ ಗೊರಕೆ ಹೋಗಿಸಲು ನಾವು ತೆಗೆದುಕೊಳ್ಳುವ ಸಣ್ಣ ಸ್ಟೆಪ್ಸ್ ಆರೋಗ್ಯಕರ ಜೀವನಕ್ಕೆ ಬುನಾದಿಯಾಗುತ್ತದೆ..

  • ತೂಕ ಇಳಿಸಿಕೊಳ್ಳಿ: ಖಂಡಿತ ತೂಕ ಇಳಿಸಿಕೊಳ್ಳಿ. ಇದು ಗೊರಕೆಗೆ ಅಷ್ಟೇ ಅಲ್ಲ, ಆರೋಗ್ಯಕ್ಕೆ ಒಳ್ಳೆಯದು.
  • ಒಂದು ಸೈಡ್‌ನಲ್ಲಿ ಮಲಗಿ: ಅಂಗಾತ ಮಲಗುವ ಅಭ್ಯಾಸ ನಿಲ್ಲಿಸಿ, ಯಾವುದಾದರೂ ಸೈಡ್ ಆರಿಸಿ ಹಾಗೇ ಮಲಗಿ.
  • ಬೆಡ್ ಸ್ವಲ್ಪ ಮೇಲೆ ಮಾಡಿ: ತಲೆದಿಂಬು ಇಡುವ ಜಾಗ ಮೇಲೆ ಮಾಡಿ. ಅಥವಾ ಎರಡು ದಿಂಬು ಹಾಕಿಕೊಂಡು ಮಲಗಿ.
  • ಮಲಗುವಾಗ ಮದ್ಯಪಾನ ಬೇಡ: ರಾತ್ರಿ ಹೊತ್ತು ಮದ್ಯಪಾನ ಮಾಡಬೇಡಿ. ಇದು ನಿಮ್ಮ ನಿದ್ದೆಗೆ ತೊಂದರೆ ಮಾಡುತ್ತದೆ. ಅಲ್ಲದೇ ಗೊರಕೆ ಹೊಡೆಯುವಂತೆ ಮಾಡುತ್ತದೆ.
  • ಧೂಮಪಾನ ಬೇಡ: ಮದ್ಯಪಾನವಷ್ಟೇ ಅಲ್ಲ,ಧೂಮಪಾನವೂ ಒಳ್ಲೆಯದಲ್ಲ. ಇದು ನಿಮ್ಮ ಆರೋಗ್ಯಕ್ಕೂ ಹಾನಿಕರ ಅಲ್ಲದೇ ನಿದ್ದೆಗೂ ತೊಂದರೆ.
  • ಹೆಚ್ಚು ನಿದ್ದೆ ಮಾಡಿ: ದಿನಕ್ಕೆ ಮೂರು, ನಾಲ್ಕು ಗಂಟೆ ನಿದ್ದೆ ಮಾಡುವ ಅಭ್ಯಾಸ ಬೇಡ. ಚೆನ್ನಾಗಿ ನಿದ್ದೆ ಮಾಡಿ. ಇದರಿಂದ ನಿಮ್ಮ ಸಮಸ್ಯೆ ದೂರಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss