ರಾತ್ರಿ ಎಷ್ಟು ಹೊತ್ತಿಗೆ ಊಟ ಮಾಡುತ್ತೀರಾ? ಏಳು ಗಂಟೆ ಮೇಲೆ ಮಾಡುತ್ತಿದ್ದರೆ ಮೊದಲು ಆ ಅಭ್ಯಾಸ ನಿಲ್ಲಿಸಿ. ಇನ್ನು ಏನು ತಿನ್ನುತ್ತಿದ್ದೀರ ಎನ್ನುವುದು ಮುಖ್ಯ. ರಾತ್ರಿ ಏಳರ ನಂತರ ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ.. ಏಕೆಂದರೆ ಈ ಆಹಾರಗಳಿಂದ ನಿದ್ದೆ ಬಾರದ ಸಮಸ್ಯೆ ಹುಟ್ಟುತ್ತದೆ. ಯಾವ ಆಹಾರ ನೋಡಿ..
- ಕೋಸುಗಡ್ಡೆ: ತರಕಾರಿಗಳನ್ನು ಮಧ್ಯಾಹ್ನ ತಿನ್ನುವುದು ಒಳ್ಲೆಯದು. ಅದರಲ್ಲು ಕೋಸು, ಹೂಕೋಸು, ಬ್ರೊಕೊಲಿ ಈ ತರಕಾರಿಗಳನ್ನು ರಾತ್ರಿ ತಿನ್ನಬೇಡಿ. ಇದರಲ್ಲಿ ಫೈಬರ್ ಹೆಚ್ಚಿದ್ದು, ಬೇಗ ಡೈಜಸ್ಟ್ ಆಗೋದಿಲ್ಲ. ಇದರಿಂದಾಗಿ ಮಲಬದ್ಧತೆ ಆಗಬಹುದು.
- ಟೊಮ್ಯಾಟೊ ಕೆಚಪ್: ಟೊಮ್ಯಾಟೊ ಕೆಚಪ್ ಹಾಗೂ ಅದನ್ನು ಹಾಕಿಕೊಂಡು ತಿನ್ನುವ ಯಾವ ಆಹಾರವೂ ರಾತ್ರಿ ಸಮಯ ಬೇಡ. ಬ್ರೆಡ್,ಫ್ರೈಡ್ ರೈಸ್,ಫ್ರೈಡ್ ಚಿಕನ್,ಗೋಬಿ ಇವುಗಳ ಜೊತೆಗೆ ಸಾಸ್ ಹಾಕಿ ತಿಂದರೆ ಅಸಿಡಿಟಿ ಹೆಚ್ಚುತ್ತದೆ.
- ಚೀಸ್: ಚೀಸ್ ಹಾಗೂ ಮಾಂಸ ತಿಂದರೆ ನಿಮಗೆ ನಿದ್ದೆ ಬರೋದಿಲ್ಲ. ನಿದ್ದೆ ಮಾಡುವ ಬದಲು ನೀವು ಹೆಚ್ಚು ಅಲರ್ಟ್ ಆಗಿರುತ್ತೀರಿ. ಇದನ್ನು ತಿಂದು ಮಲಗುವುದು ಕಷ್ಟ.
- ಡಾರ್ಕ್ ಚಾಕಲೇಟ್: ಡಾರ್ಕ್ ಚಾಕೋಲೇಟ್ಸ್ನಲ್ಲಿ ಇರುವ ಅಮೈನೋ ಆಸಿಡ್ಸ್ ನಿಮ್ಮನ್ನು ನಿದ್ದೆಯಿಂದ ಎಬ್ಬಿಸುತ್ತವೆ. ಚಾಕೋಲೆಟ್ ತಿಂದು ನಿದ್ದೆ ಬಂದಿಲ್ಲ ಎಂದುಕೊಂಡರೆ ಅದರಲ್ಲಿ ಆಶ್ಚರ್ಯವೇ ಇಲ್ಲ.
- ಕಾಫಿ: ಕಾಫಿ ಬಗ್ಗೆ ನಾವು ಹೇಳಿದರೆ ನಿಮಗೆ ಆಶ್ಚರ್ಯವೇನೂ ಇಲ್ಲ. ಆದರೆ ಮಧ್ಯಾಹ್ನದ ಮೇಲೆ ಯಾವಾಗ ಹೆಚ್ಚು ಕಾಫಿ ಕುಡಿದರೂ ರಾತ್ರಿ ನಿದ್ದೆ ಬರೋದಿಲ್ಲ. ಅತೀ ಕಡಿಮೆ ಕಾಫಿ ಸೇವನೆ ಮಾಡಿದಷ್ಟು ಒಳ್ಳೆಯದು.
- ಮದ್ಯ: ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎನ್ನುತ್ತಾರೆ. ಆದರೆ ಇದು ನಿಮ್ಮ ಸ್ಲೀಪ್ ಸೈಕಲ್ನನ್ನು ಹಾಳು ಮಾಡುತ್ತದೆ. ಪ್ರತಿದಿನ ಇದನ್ನೆ ಮಾಡಿದರೆ ಅಡಿಕ್ಟ್ ಆಗಿ ಹೋಗುತ್ತೀರಿ. ಕುಡಿತ ಇಲ್ಲದೆ ನಿದ್ದೆ ಬರುವುದೇ ಇಲ್ಲ.