ಬೆಂಗಳೂರು: ನೋಡೆಲ್ ಅಧಿಕಾರಿಗಳಾಗಿ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ನೇಮಕಗೊಂಡಿರುವ 8 ಜನ ತಹಶೀಲ್ದಾರರು ರಾತ್ರಿ ಪಾಳಿಯ ಕೆಲಸವನ್ನು ಮನೆಯಿಂದ ಮಾಡಲು ಅವಕಾಶ ಕೊಡುವುದಾಗಿ ಮನವಿ ಮಾಡಿಕೊಂಡು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಆರೈಕೆ ಕೇಂದ್ರದಲ್ಲಿ ನಮಗೆ ಯಾವುದೇ ಸುರಕ್ಷತೆಗಳಿಲ್ಲ. ಅಲ್ಲಿ ಸೋಂಕಿತರನ್ನು ಆರೈಕೆ ಮಾಡುವ ಶೂಶ್ರೂಷಕರಿಗೆ, ವೈದ್ಯರಿಗೆ, ಸ್ವಚ್ಛತಾ ಕೆಲಸ ಮಾಡುವವರಿಗೆ ಸುರಕ್ಷತಾ ಸಾಧನಗಳನ್ನು ನೀಡುತ್ತಾರೆ. ಅವರ ಸುರಕ್ಷತೆಗೆ ಬೇಕಾಗಿರುವ ಎಲ್ಲ ಸೌಲಭ್ಯಗಳು ಇರುತ್ತವೆ. ಆದರೆ ನಮಗೆ ಈ ಯಾವ ಸೌಲಭ್ಯವೂ ಇರುವುದಿಲ್ಲ.
ನಾವು ಕೆಲಸ ಮಾಡುವ ಸ್ಥಳಗಳಿಗೆ ನೀವು ಬರಬೇಡಿ ಎಂದು ವೈದ್ಯರು ಹೇಳುತ್ತಾರೆ. ನಮ್ಮ ಮನೆಗಳಲ್ಲಿ ಕಾಯಿಲೆಯಿಂದ ಬಳಲುತ್ತಿರುವ ವಯಸ್ಸಾದ ತಂದೆ ತಾಯಿ ಇದ್ದಾರೆ. ಸದಾ ಆತಂಕದಲ್ಲಿಯೇ ಇರುವಂತಾಗಿದೆ. ಮತ್ತು ಕೋವಿಡ್ ಕೇಂದ್ರದಲ್ಲಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ನಾವು ಮನೆಯಿಂದಲೇ ಕೆಲಸ ಮಾಡುತ್ತೇವೆ ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡು, ಬಿಬಿಎಂಪಿ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.