Tuesday, July 5, 2022

Latest Posts

ರಾತ್ರಿ 12 ಗಂಟೆ ಆದರೂ ನಿಮಗೆ ನಿದ್ದೆ ಬರುವುದಿಲ್ಲವಾ? ಲೇಟಾಗಿ ಮಲಗುವುದರಿಂದ ಆಗುವ ಲಾಭಗಳಿವು..

ರಾತ್ರಿ ಹತ್ತು ಗಂಟೆಗೆ ಹಾಸಿಗೆ ಸೇರಿದರೂ ನಿದ್ದೆ ಮಾಡುವುದು ಮಾತ್ರ ಹನ್ನೆರಡು ಅಥವಾ ಒಂದು ಗಂಟೆಗೆ. ವಯಸ್ಸಾದವರಿಗೆ ನಿದ್ದೆ ಬರದೆ ಹೀಗಾಗಬಹುದು. ಅದರ ಬಗ್ಗೆ ಮಾತನಾಡುತ್ತಿಲ್ಲ. ಇದು ಈಗಿನ ಜನರೇಶನ್ ಮಾತು ಅವರು ಫೋನ್, ಲ್ಯಾಪ್‌ಟಾಪ್ ಅಥವಾ ಏನೋ ಚಿಂತೆಯಲ್ಲಿ ಮುಳುಗಿರುತ್ತಾರೆ. ಇದರಿಂದ ಅವರನ್ನು ಮೊಬೈಲ್ ಹೊರತರುತ್ತದೆ. ಮೊಬೈಲ್ ನೋಡಿ ನೋಡಿ ಸುಸ್ತಾಗಿಯೇ ಅವರು ನಿದ್ದೆ ಮಾಡುತ್ತಾರೆ.
ಆದರೆ ಲೇಟಾಗಿ ಮಲಗಿ ಬೇಗ ಎದ್ದು ಮಾಮೂಲಿಯಂತೆ ಆಫೀಸಿಗೆ ಹೋಗುತ್ತಾರೆ. ಇವರಿಗೆ ಇಷ್ಟೇ ನಿದ್ದೆ ಸಾಕಾಗುತ್ತದೆ. ಅದು ಹೇಗೆ? ಲೇಟಾಗಿ ಮಲಗುವುದರಿಂದಲೂ ಲಾಭಗಳಿವೆ ಎನ್ನುತ್ತಾರೆ.. ಏನು ಲಾಭ?

  • ಜಾಣರಂತೆ: ಲೇಟಾಗಿ ಮಲಗುವವರು ಸ್ವಲ್ಪ ಜಾಣರಂತೆ. ಮಾಮೂಲಿ ಸಮಯಕ್ಕೆ ಮಲಗಿ ಬೆಳಗ್ಗೆ ಬೇಗ ಎದ್ದು ಕೆಲಸ ಮಾಡುವವರು ಶಿಸ್ತು ಬದ್ಧ ಜೀವನ ಮಾಡುತ್ತಾರೆ. ಆದರೆ ಲೇಟಾಗಿ ಮಲಗುವವರು ಜಾಣರಂತೆ. ಹೆಚ್ಚು ಐಕ್ಯೂ ಇರುವವರಿಗೆ ಬೇಗ ಬೋರಾಗುತ್ತದೆ. ಅವರು ಮಾಡಿದ ಕೆಲಸವನ್ನೇ ಮಾಡುವುದಿಲ್ಲ. ಹಾಗಾಗಿ ಅವರಿಗೆ ನಿದ್ದೆ ಬರುವುದಿಲ್ಲ.
  • ಅತಿ ಎನರ್ಜಿ: ಕೆಲವೊಮ್ಮೆ ಬೇಗ ಮಲಗಿ ಬೇಗ ಎದ್ದರೂ ನಮ್ಮಲ್ಲಿ ಎನರ್ಜಿಯೇ ಇರುವುದಿಲ್ಲ. ಆದರೆ ಲೇಟಾಗಿ ಮಲಗಿ ಬೇಗ ಏಳುವವರಿಗೆ ತುಂಬಾನೇ ಎನರ್ಜಿ ಇರುತ್ತದಂತೆ. ಅವರು ಮಾಡುವ ನಿದ್ದೆಗೂ ಎನರ್ಜಿಗೂ ಸಂಬಂಧ ಇರುವುದಿಲ್ಲವಂತೆ. ಕಡಿಮೆ ಅವಧಿ ಮಲಗಿದರೂ ಒಳ್ಳೆಯ ನಿದ್ದೆ ಅವರದ್ದಾಗಿರುತ್ತದೆ.
  • ಹೆಚ್ಚು ಸಮಯ: ಕೆಲವರಿಗೆ ಬೇಗ ಮಲಗಿ ಬೇಗ ಏಳುವ ಅಭ್ಯಾಸ. ಇದರಿಂದ ಕೆಲಸ ಮಾಡುವವರಿಗೆ ತೊಂದರೆ. ಏನೋ ಹೆಚ್ಚು ಕೆಲಸ ಇರುತ್ತದೆ. ರಾತ್ರಿ ಹೊತ್ತು ಅದನ್ನು ಮಾಡಿ ಮುಗಿಸಿದರೆ ಬೆಳಗ್ಗೆ ಆರಾಮಾಗಿ ಎದ್ದು ಹೋಗುತ್ತಾರೆ. ಆದರೆ ಬೇಗ ಮಲಗಿದರೆ ಅಲ್ಲಿಯೂ ಸಮಯ ಇಲ್ಲ. ಬೇಗ ಎದ್ದರೂ ಸಮಯ ಆಗುವುದಿಲ್ಲ. ಹಾಗಾಗುತ್ತದೆ.
  • ಯಾವ ಸಮಯಕ್ಕಾದರೂ ಅಡ್ಜಸ್ಟ್: ಕೆಲವರಿಗೆ ಎಲ್ಲಿರಲಿ, ಏನೇ ಕೆಲಸ ಇರಲಿ. ನಿದ್ದೆ ಸಮಯಕ್ಕೆ ಮಲಗಿ ಬಿಡಬೇಕು. ಇಲ್ಲದಿದ್ದರೆ ಮಾರನೇ ದಿನ ಅವರನ್ನು ನೊಡಲು ಆಗುವುದಿಲ್ಲ. ಅದೇ ಲೇಟಾಗಿ ಮಲಗುವವರಿಗೆ ಇಷ್ಟೇ ಗಂಟೆ ನಿದ್ದೆ ಬೇಕು ಎಂದಿಲ್ಲ. ಎಲ್ಲಿ ಎಷ್ಟು ಹೊತ್ತಿಗೆ ಮಲಗಿದರೂ ಬೆಳಗ್ಗೆ ಫ್ರೆಶ್ ಆಗಿಯೇ ಇರುತ್ತದೆ.
  • ಮೆಡಿಟೇಶನ್ ಅವಧಿ: ಕೆಲವರಿಗೆ ಬೆಳಗ್ಗೆ ಬೇಗ ಎದ್ದರೆ ಜಗತ್ತು ಶಾಂತಿಯುತವಾಗಿ ಕಾಣುತ್ತದೆ. ಆದರೆ ಹಲವರಿಗೆ ರಾತ್ರಿ ಚೆನ್ನಾಗಿ ಅನಿಸುತ್ತದೆ. ರಾತ್ರಿ ಜನರು ಮಲಗಿರುತ್ತಾರೆ. ಜಗತ್ತು ನಿಶ್ಯಬ್ದವಾಗಿರುತ್ತದೆ. ಇಲ್ಲಿ ಅವರು ಅವರಿಗಾಗಿ ಸಮಯ ಎತ್ತಿಡುತ್ತಾರೆ.
  • ಕ್ರಿಯೇಟಿವ್: ರಾತ್ರಿ ಲೇಟಾಗಿ ಮಲಗುವವರಿಗೆ ಕ್ರಿಯೇಟಿವ್ ಆಗುವ ಅಭ್ಯಾಸ ಇರುತ್ತದೆ. ರಾತ್ರಿ ಲೇಟಾಗಿ ಮಲಗುವವರು ತಮ್ಮ ಅಭ್ಯಾಸಗಳಿಗೆ ಸಮಯ ನೀಡುತ್ತಾರೆ. ಪೇಂಟ್ ಮಾಡುವುದು, ಬರೆಯುವುದು ಹೀಗೆ ಏಕಾಂತದಲ್ಲಿ ತಮ್ಮ ಹವ್ಯಾಸಗಳಿಗೆ ಒತ್ತು ನೀಡುತ್ತಾರೆ.
  • ಏಳುವುದು ಸುಲಭ: ಚೆನ್ನಾಗಿ ನಿದ್ದೆ ಮಾಡುವವರನ್ನು ಎಬ್ಬಿಸಿಕೊಂಡು ಹೋಗುವುದೇ ಕಷ್ಟ. ನಿದ್ದೆ ಸರಿಯಾಗಿದ್ದರೆ ಚೆನ್ನಾಗಿಯೇ ಇರುತ್ತಾರೆ. ಅದೇ ನಿದ್ದೆ ಆಗದಿದ್ದರೆ ಅವರ ಮೂಡ್ ಬಗ್ಗೆ ಹೇಳಬೇಕಿಲ್ಲ. ಇನ್ನು ಲೇಟಾಗಿ ಮಲಗುವವರಿಗೆ ಎಷ್ಟೊತ್ತಿಗೆ ಎಬ್ಬಸಿದರೂ ಅವರು ಅದೇ ರೀತಿ ಇರುತ್ತಾರೆ. ಅವರನ್ನು ಏಳಿಸುವುದು ಈಸಿ. ಟ್ರಿಪ್ ಪ್ಲಾನ್ ಮಾಡುವುದಾದರೆ ಇಂಥವರ ಜೊತೆ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss