ರಾಬರ್ಟ್ ಟೀಸರ್ ಹೆಚ್ಚಿದ ಕುತೂಹಲ

0
226

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ರಾಬರ್ಟ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ  ಪೋಸ್ಟ್ ರ್ ಗಳು ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ. ಇದೀಗ ಫೆ.16 ರಂದು ದರ್ಶನ್ ಹುಟ್ಟುಹಬ್ಬದ ಕೊಡುಗಡೆಯಾಗಿ ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಕಾತುರ. ಕುತೂಹಲ ಹೆಚ್ಚಾಗುತ್ತಿದೆ. ಅನೇಕ ತಿಂಗಳಿಂದ ರಾಬರ್ಟ್ ಚಿತ್ರದ ಟೀಸರ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದರು.

ಈಗಾಗಲೆ ಫಸ್ಟ್ ಮತ್ತು ಸೆಕೆಂಡ್ ಲುಕ್ ಗಳ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿರುವ  ರಾಬರ್ಟ್ ತಂಡ ಈಗ ವಿಶೇಷ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ದಿನವೇ ಅವರಿಗೆ  ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ ಟೀಸರ್ ಉಡುಗೊರೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಅಂದಹಾಗೆ

ರಾಬರ್ಟ್ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರದ ಟೀಸರ್ ರಿಲೀಸ್ ಬಗ್ಗೆ ತರುಣ್ ಸುಧೀರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. 16ರ ಮಧ್ಯರಾತ್ರಿ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಅಪ್ ಡೇಟ್ ನೀಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ದಚ್ಚು ಫ್ಯಾನ್ಸ್ ರಾಬರ್ಟ್ ಹಬ್ಬ ಮಾಡುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬವನ್ನು ಸುಲ್ತಾನ್ ಸಂಭ್ರಮ, ಬಾಸ್ ಪರ್ವ ಎನ್ನುವ ಹೆಸರಿನಲ್ಲಿ ಆಚರಿಸುಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ರಾಬರ್ಟ್  ಟೀಸರ್ ಬಿಡುಗಡೆಯ ಸಂಭ್ರಮ ಸೇರಿ ಡಬಲ್ ಸೆಲಿಬ್ರೇಷನ್ ಅಂದು ನಡೆಯಲಿದೆ. ಚಿತ್ರದ ಮೊದಲನೇ ಲುಕ್ ನಲ್ಲಿ ರಾಬರ್ಟ್ ಅವತಾರದಲ್ಲಿ ಇತ್ತು. ಎರಡನೇ ಲುಕ್ ನಲ್ಲಿ ದರ್ಶನ್ ಆಂಜನೇಯನ ಅವತಾರ ಎತ್ತಿದ್ದರು. ಮುಂದೆ ಮೂರನೆ ಲುಕ್ ಯಾವ ಸಂಪ್ರದಾಯದ ಹಾಗೆ ಇರಬಹುದು ಎಂದು ಅನೇಕರು ಈಗಾಗಲೇ ಲೆಕ್ಕ ಹಾಕುತ್ತಿದ್ದಾರೆ. ಈ ಚಿತ್ರದಲ್ಲಿ ನಟ ದರ್ಶನ್ ಮೂರು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯ ರಿಲೀಸ್ ಆಗುತ್ತಿರುವ ಟೀಸರ್ ನಲ್ಲಿ ಆ ಮೂರು ಕ್ಯಾರೆಕ್ಟರ್ ಗಳು ರಿವೀಲ್ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವೇ ಇದೆ. ಈ ಚಿತ್ರದ ನಾಯಕಿಯಾಗಿ ಆಶಾ ಭಟ್ ಅವರು ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here