ರಾಮನಗರ: ಪ್ರಮುಖವಾಗಿ ೨೦೧೯ ರ ಆಗಸ್ಟ್ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿಯೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ೩೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಪೂರೈಕೆ ಮಾಡುವವರನ್ನು ಬಂಧಿಸಿ ೬೦ ಕೆ.ಜಿಗೂ ಹೆಚ್ಚು ಮಾದಕ ವಸ್ತುವನ್ನು ವಶ ಪಡಿಸಿಕೊಳ್ಳಲಾಗಿತ್ತು.
ಹಾಗೆಯೇ ರಾಮನಗರದ ಐಜೂರು ಠಾಣೆ ಪೊಲೀಸರು ಕಳೆದ ವರ್ಷ ಗಾಂಜಾ ಮಾರಾಟದ ದೊಡ್ಡ ಜಾಲವೊಂದನ್ನು ಪತ್ತೆಮಾಡಿದ್ದರು. ಆ ಸಂದರ್ಭದಲ್ಲಿ ಬರೋಬ್ಬರಿ ೪.೪ ಲಕ್ಷ ಮೌಲ್ಯದ ೪೪ ಕೆ.ಜಿ.ಯಷ್ಟು ಗಾಂಜಾ ಉತ್ಪನ್ನವನ್ನ ವಶಕ್ಕೆ ತೆಗೆದುಕೊಂಡಿದ್ದರು. ಇದು ಜಿಲ್ಲೆಯಲ್ಲಿ ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾದ ದೊಡ್ಡ ಮೊತ್ತದ ಮಾದಕ ವಸ್ತುವಾಗಿತ್ತು.
ಇದಲ್ಲದೆ, ಜನನಿಬಿಡ ವಸತಿ ಪ್ರದೇಶವೊಂದರ ಮನೆಯಲ್ಲಿ ಸಂಗ್ರಹಿಸಿದ್ದ ೨೦ ಕೆ.ಜಿ.ಗೂ ಹೆಚ್ಚು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇನ್ನು ಈ ಬಗ್ಗೆ ಜಿಲ್ಲೆಗೆ ನೂತನ ಎಸ್ಪಿಯಾಗಿ ಬಂದಿರುವ ಎಸ್. ಗಿರೀಶ್ ಅವರು ನ್ಯೂಸ್ ೧೮ ಜೊತೆಗೆ ಮಾತನಾಡಿ ಗಾಂಜಾ ಮಾರಾಟಗಾರರು, ಬೆಳೆಗಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಜಿಲ್ಲೆಯಲ್ಲಿ ಯಾರು ಸಹ ಗಾಂಜಾ ಅಥವಾ ಇನ್ಯಾವುದೇ ಡ್ರಗ್ಸ್ ಮಾರಾಟ ಮಾಡುವುದು, ಆಮದು ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುವುದು ಕಂಡುಬAದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮಗಳನ್ನ ಕೈಗೊಳ್ಳಲಾಗುತ್ತದೆ. ನಮ್ಮ ಜಿಲ್ಲೆಯಲ್ಲಾಗಲಿ, ಅಥವಾ ಬೇರೆ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಡ್ರಗ್ಸ್ ಪೂರೈಕೆ ಮಾಡುವ ಕಾರ್ಯದಲ್ಲಿ ಯಾರಾದರೂ ಸಿಕ್ಕಿದರೆ ಕಠಿಣ ಕಾನೂನು ಕ್ರಮ ಖಂಡಿತ.
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ನಮ್ಮ ಪೊಲೀಸ್ ಇಲಾಖೆ ಡ್ರಗ್ಸ್ ತಡೆಯುವುದಕ್ಕೆ ವಿಶೇಷವಾದ ಆಸಕ್ತಿ ವಹಿಸಲಾಗುತ್ತದೆ. ಈಗಾಗಲೇ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೆಲವರನ್ನ ಕರೆಸಿ ಪರೇಡ್ ಮಾಡಿ ಎಚ್ಚರಿಕೆ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಹದ್ದಿನ ಕಣ್ಣಿಡಲಾಗುತ್ತೆ ಎಂದು ರಾಮನಗರ ನೂತನ ಎಸ್ಪಿ ಎಸ್. ಗಿರೀಶ್ ಡ್ರಗ್ಸ್ ದಂಧೆಕೋರರಿಗೆ ಖಡಕ್ ಎಚ್ಚರಿಕೆ ಕೊಟ್ಟರು.