ಹೊಸದಿಗಂತ ವರದಿ,ರಾಮನಗರ:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಾಠ ಅಭಿವೃದ್ಧಿ ನಿಗಮ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿಲ್ಲ.
ನಗರದೊಳಗಿನ ಜನಜೀವನ ಎಂದಿನoತೆ ಇದೆ. ಕೆಎಸ್ಆರ್ಟಿಸಿಬಸ್, ಆಟೊಗಳು ಸಂಚರಿಸುತ್ತಿವೆ. ಅಂಗಡಿ ಮುಂಗಟ್ಟು, ಹೋಟೆಲ್ಗಳು ತೆರೆದಿವೆ. ರೇಷ್ಮೆಗೂಡು ಮಾರುಕಟ್ಟೆ, ಎಪಿಎಂಸಿಯಲ್ಲೂ ವಹಿವಾಟು ಎಂದಿನoತೆ ಇದೆ.
ರಾಮನಗರದ ಪ್ರಮುಖ ಸ್ಥಳಗಳಾದ ಕೆಂಪೇಗೌಡ ಸರ್ಕಲ್, ಹಳೇ ಬಸ್ ನಿಲ್ದಾಣ, ರಾಯರದೊಡ್ಡಿ ಸರ್ಕಲ್, ರೈಲ್ವೆ ನಿಲ್ದಾಣ, ಎಂ.ಜಿ ರಸ್ತೆ, ಕಾಮನಗುಡಿ ವೃತ್ತದಲ್ಲಿ ಎಂದಿನoತೆ ವ್ಯಾಪಾರ ಇತ್ತು ವೃತ್ತಗಳು ಜನ ಜನಜುಂಗುಳಿಯಿoದ ಕೂಡಿತು. ಐಜೂರು ವೃತ್ತದಲ್ಲಿ ಮುಂಜಾನೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರವೇ ಕಾರ್ಯಕರ್ತರು ವಶಕ್ಕೆ: ರಾಮನಗರ ಐಜೂರು ವೃತ್ತದಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಗರದಲ್ಲಿ ಜನಜೀವನ ಎಂದಿನoತೆ.ಆದರೂ ಮುಂಜಾಗ್ರುತೆ ಕ್ರಮವಾಗಿ ಅಲ್ಲಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು ಶಾಂತಿಯುತ ಪ್ರತಿಭಟನಗೆ ಅವಕಾಶ ಮಾಡಿಕೊಡಲಾಗಿದೆ. ರಾಮನಗರದಲ್ಲಿ ಬಸ್ ಸಂಚಾರ ಎಂದಿನoತಿದೆ. ಅಂಗಡಿ-ಮುoಗಟ್ಟುಗಳು ತೆರೆದಿವೆ. ಟ್ಯಾಕ್ಸಿ, ಟೂರ್ಸ್ ಅಂಡ್ ಟ್ರಾವಲ್ಸ್ ಸೇವೆಯೂ ನಡೆಯುತ್ತಿದೆ.