Tuesday, June 28, 2022

Latest Posts

ರಾಮನಗರ: ಅಕ್ರಮವಾಗಿ ಸಾಗಿಸುತ್ತಿದ್ದ ಕರುಗಳನ್ನು ರಕ್ಷಿಸಿದ ಹಿಂದೂಜಾಗರಣಾ ವೇದಿಕೆ

ರಾಮನಗರ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಾಣಿಕೆ ಮಾಡುತ್ತಿದ್ದ ೧೯ ಸೀಮೆ ಹಸುವಿನ ಕರು ಹಾಗೂ ಒಂದು ಎಮ್ಮೆ ಕರುವನ್ನು ಹಿಂದೂಜಾಗರಣಾ ವೇದಿಕೆ ಕಾರ್ಯಕರ್ತರು ಮತ್ತು ಯಲಚಿಪಾಳ್ಯದ ಯುವಕರು ರಕ್ಷಣೆ ಮಾಡುವಲ್ಲಿ ಸಫಲ ಗೊಂಡಿದ್ದಾರೆ.

ಹಸುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಣಿಕೆಮಾಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿಂಜಾವೆ ಕಾರ್ಯಕರ್ತರು, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನವನ್ನು ತಡೆದ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಸೀಮೆ ಹಸುವಿನ ಕರುಗಳನ್ನು ಅಮಾನುಷವಾಗಿ ತುಂಬಿರುವುದು ಪತ್ತೆಯಾಗಿದೆ.

ಹಸುಗಳನ್ನು ರಕ್ಷಣೆ ಮಾಡಿದ ಹಿಂಜಾವೆ ಕಾರ್ಯಕರ್ತರು ಗ್ರಾಮಾಂತರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಹಿಂಜಾವೆ ಕಾರ್ಯಕರ್ತರೇ ಹಸುಗಳನ್ನು ತುಂಬಿದ್ದ ಟೆಂಪೋವನ್ನು ಪೊಲೀಸ್ ಠಾಣೆಗೆ ತೆಗೆದು ಕೊಂಡು ಹೋಗಿ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೀಮೆ ಹಸುವಿನ ಕರುಗಳನ್ನು ಗೋಶಾಲೆಗೆ ಒಪ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss