Thursday, August 11, 2022

Latest Posts

ರಾಮನಗರ: ಅಪೌಷ್ಠಿಕ ಮಕ್ಕಳ ಮುಕ್ತ ತಾಲ್ಲೂಕು ಕಾಗಿಸಲು ಸಿಡಿಪಿಒ ಮನವಿ

ರಾಮನಗರ: ಅಪೌಷ್ಠಿಕ ಮಕ್ಕಳ ಮುಕ್ತ ತಾಲ್ಲೂಕು ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಯುತ್ತಿಸುತ್ತಿದ್ದು ಅದಕ್ಕೆ ಎಲ್ಲರೂ ಸಹಕಾರ ನೀಡಿ ಕೈ ಜೋಡಿಸಬೇಕೆಂದು ಸಿಡಿಪಿಒ ಡಿ.ಮಂಜುನಾಥ್ ಮನವಿ ಮಾಡಿದರು. ತಾಲ್ಲೂಕಿನ ಶಿವನಹಳ್ಳಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪೋಷಣ್ ಮಾಸಾಚರಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಗರ್ಭಿಣಿಯರಾದಾಗ ಅವರಿಗೆ ಸರಿಯಾದ ಪೌಷ್ಠಿಕ ಆಹಾರ ಸಿಗದಿದ್ದರೆ ಜನಿಸುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತವೆ ಮತ್ತು ಅಂಗವೈಫಲ್ಯತೆಗೆ ಒಳಗಾಗುತ್ತವೆ ಹಾಗೂ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ ಸಿಗದಿದ್ದರೆ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ತಾಯಿ ಮತ್ತು ಮಗುವಿನಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸರ್ಕಾರವು ಪೌಷ್ಠಿಕ ಆಹಾರವನ್ನು ಸಿಗುವಂತೆ ಮಾಡಲು ಇಲಾಖೆ ಮುಖಾಂತರ ಕಾರ್ಯಕ್ರಮ ರೂಪಿಸಿದೆ. ಸರ್ಕಾರದಿಂದ ನೇರವಾಗಿ ತಾಯಿ ಮತ್ತು ಮಗುವಿಗೆ ಪೌಷ್ಠಿಕ ಆಹಾರವನ್ನು ಕೊಡುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರು ಈ ಒಂದು ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಬೇಕೆಂದು ಮನವಿ ಮಾಡಿದರು.

ಕಾರ್ಯಕರ್ತೆಯರು ಗ್ರಾಮಗಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಠಿಕಾಂಶಗಳನ್ನು ಕೊಡಿಸುವ ಕೆಲಸ ಮಾಡಬೇಕೆಂದರು. ಅಂಗನವಾಡಿಗಳಲ್ಲಿ ವಿಶಾಲವಾದ ಜಾಗ ಮತ್ತು ನೀರಿನ ಅನುಕೂಲ ಇರುವುದರಿಂದ ಅಲ್ಲಿಯೇ ಕೈ ತೋಟವನ್ನು ನಿರ್ಮಿಸಿ ತರಕಾರಿ  ಬೆಳೆಯಬೇಕು. ಅದನ್ನು ಮಕ್ಕಳಿಗೆ ಕೊಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕೆಂದು ಹೇಳಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನಾಗು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಭಾಗ್ಯಶಾಂತರಾಜು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿನುತ, ಶಿವನಹಳ್ಳಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ರೀಮಾ, ಮೇಲ್ವಿಚಾರಕಿಯರಾದ ವೀಣಾ, ಹಿಮಾಮಣಿ ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss