ರಾಮನಗರ : ತಾಲ್ಲೂಕಿನ ಕಸಬಾ ಹೋಬಳಿಯ ಪ್ರತಿ ಪಂಚಾಯಿತಿಗೆ ಕಾಂಗ್ರೆಸ್ನಿAದ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲಾ ಕೋವಿಡ್ ಆರೋಗ್ಯ ಹಸ್ತ ಅಧ್ಯಕ್ಷರಾದ ಹೆಚ್.ಎ.ಇಕ್ಬಾಲ್ ಹುಸೇನ್ ಅವರು ಆಗಮಿಸಿ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ವಾರಿಯರ್ಸ್ ತಂಡದವರು ಪ್ರತಿ ಮನೆಗಳಿಗೆ ತೆರಳಿ ಮನೆಯ ಪ್ರತಿ ಸದಸ್ಯರ ಹೆಸರುಗಳನ್ನು ನೋಂದಾಯಿಸಿಕೊ0ಡು ಹಾಗೂ ಕರೊನಾ ಹರಡಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್, ಸ್ಯಾನಿಟೇಜರ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು ಹಾಗೂ ಪದಾಧಿಕಾರಿಗಳು, ಜಿಪಂ ಸದಸ್ಯೆ ಶ್ರೀಮತಿ ನಾಗರತ್ನಮ್ಮ ಶಿವಣ್ಣ, ತಾಪಂ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಹಾಗೂ ಕಸಬಾ ಹೋಬಳಿ ಟಾಸ್ಕ್ ಪೋರ್ಸ್ ಅಧ್ಯಕ್ಷ ವೀರಭದ್ರ (ಸ್ವಾಮಿ ಬೋರ್ವೆಲ್) ಹಾಗೂ ಹೋಬಳಿಯ ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು.