Wednesday, August 10, 2022

Latest Posts

ರಾಮನಗರ: ಇಮ್ಮಡಿ ಪುಲಿಕೇಶಿಯ ದ್ವಿಗ್ವಿಜಯ ಸ್ಮರಣೋತ್ಸವ ಆಚರಣೆ

ರಾಮನಗರ: ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಸಾಮ್ರಾಟ್ ಇಮ್ಮಡಿ ಪುಲಿಕೇಶಿಯ ಚರಿತ್ರೆಯನ್ನು ಇಂದಿಗೂ ಮರೆಯಲಾಗದು ಎಂದು ಕದಂಬ ಸೈನ್ಯದ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಗಾಂಧಿ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ, ದಕ್ಷಿಣ ಪತೇಶ್ವರ ಸಾಮ್ರಾಟ ಇಮ್ಮಡಿ ಪುಲಿಕೇಶಿಯ ದ್ವಿಗ್ವಿಜಯ ಸ್ಮರಣೋತ್ಸವ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿದರು.
ಇತಿಹಾಸ ಪುಟಗಳಲ್ಲಿ ತನ್ನದೇ ಆದ ಪರಾಕ್ರಮದ ಖಾತೆಯನ್ನು ತೆರೆದಿದ್ದ ಉತ್ತರ ಪತೇಶ್ವರ ಸಾಮ್ರಾಟ್ ಹರ್ಷವರ್ಧನನ್ನು ನರ್ಮದ ನದಿಯ ತೀರದಲ್ಲಿ ಆತನ ಅಪಾರಸೈನ್ಯವನ್ನು ಧೂಳಿಪಟ ಮಾಡಿ ಸಾಮ್ರಾಟನನ್ನು ಸದೆ ಬಡಿದ ಇಮ್ಮಡಿ ಪುಲಿಕೇಶಿಯ ಸಾಮರ್ಥ್ಯದ ಮುಂದೆ ಶರಣಾದ ಹರ್ಷವರ್ಧನ ಸಾಲು ವಿಜಯಗಳು ಚರಿತ್ರೆಯಲ್ಲಿ ಉಲ್ಲೇಖವಾಗಿದೆ ಎಂದರು.
ಪರಾಭವಗೊಂಡ ಹರ್ಷವರ್ಧನನ್ನೇ ಇಮ್ಮಡಿ ಪುಲಿಕೇಶಿಗೆ ದಕ್ಷಿಣ ಪತೇಶ್ವರ ಎಂಬ ಬಿರುದು ನೀಡಿ ಸತ್ಕರಿಸಿ ಸಂದಾನ ಮಾಡಿಕೊಂಡರು.ಇಲ್ಲದಿದ್ದರೆ ಭಾರತದ ಸಾಮ್ರಾಟನಾಗಿಇಮ್ಮಡಿ ಪುಲಿಕೇಶಿಯು ಭಾರತದ ಭೂಪಟದಲ್ಲಿ ಸ್ಥಾನಪಡೆಯುತ್ತಿದ್ದರು ಎಂದು ತಿಳಿಸಿದರು.
ತಮಿಳುನಾಡಿನ ಪಲ್ಲವ ಸಾಮ್ರಾಜ್ಯದ ಮಹೇಂದ್ರವರ್ಮನನ್ನು ಯುದ್ದದಲ್ಲಿ ಸೋಲಿಸಿ, ಗುಜರಾತ್ ಮಾಳ್ಯದ ರಾಜರನ್ನು ಸದೆ ಬಡಿದ ಕೀರ್ತಿ ಇಮ್ಮಡಿ ಪುಲಿಕೇಶಿಗೆ ಸೇರಬೇಕು. ಇತಿಹಾಸ ಸೇರುವಂತೆ ಮಾಡಿದ ಬಾದಾಮಿಯ ವಾಸ್ತುಶಿಲ್ಪಿ ಕಲೆ ಪ್ರಪಂಚದಲ್ಲಿಯೇ ಪ್ರಸಿದ್ದಿ ಪಡೆಯಲು ಇವರ ಕೊಡುಗೆ ಅಪಾರವಾಗಿದೆ ಎಂದ ಅವರು, ಒಂದನೇ ತರಗತಿಯಿಂದ ೭ನೇತರಗತಿವರೆಗೆ ನಮ್ಮ ಕನ್ನಡ ಸಾಮ್ರಾಜ್ಯಗಳ ರಾಜರುಗಳಾದ ಕದಂಬರು, ಗಂಗರು, ರಾಷ್ಟ್ರಕೂಟರು, ಬಾದಾಮಿ ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಟರನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಮಕ್ಕಳಿಗೆ ಪರಿಚಯಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೈನ್ಯದ ಜಿಲ್ಲಾಕಾರ್ಯದರ್ಶಿ ವೆಂಕಟಪ್ಪ, ತಾಲ್ಲೂಕು ಅಧ್ಯಕ್ಷ ಉಮೇಶ್ ರಾಂಪುರ, ಉಪಾಧ್ಯಕ್ಷರಾಜು, ಪ್ರದೀಪ್, ಜೆಡಿಎಸ್ ಮುಖಂಡ ಬೈಶ್ರೀನಿವಾಸ್, ಆಕ್ಸ್ಫರ್ಡ್ ಶಾಲೆಯ ಕಾರ್ಯದರ್ಶಿ ಚಂದ್ರು, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಧರಣೀಶ್ಮ ನಗರ ಉಪಾಧ್ಯಕ್ಷ ಗಂಗಾಧರ್ ನಾರಾಯಣ್, ಹಾಗೂ ಹಲವಾರು ಮಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss