Wednesday, August 17, 2022

Latest Posts

ರಾಮನಗರ ಉಪ ವಿಭಾಗಾಧಿಕಾರಿ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲಂಚದ ಆರೋಪ

ಹೊಸ ದಿಗಂತ ವರದಿ, ರಾಮನಗರ:

ಇಲ್ಲಿನ ಉಪವಿಭಾಗಾಧಿಕಾರಿ(ಎಸಿ)ಯನ್ನ ತೆಗೆಯಬೇಕು ಎಂದು ನಿರ್ಧಾರ ಮಾಡಿದ್ದೆ. ಮುಖ್ಯಮಂತ್ರಿಗಳು ಕೂಡ ಆದೇಶದ ಮಾಡಿದ್ದರು. ನಂತರ ಅಲ್ಲಿ ಏನೇನು ಆಟ ನಡೆದಿದೆ ಎಂಬುದು ನನಗೆಲ್ಲ ಗೊತ್ತಿದೆ. ಸಿಎಂ ಕಚೇರಿಯಿಂದ ಯಾರ್ಯಾರಿಗೆ ಪೇಮೆಂಟ್ ಆಗಿದೆ ಅಂತಾನೂ ಗೊತ್ತಿದೆ. ನಾನು ನೇರವಾಗಿ ಹೇಳ್ತಿದ್ದೇನೆ. ಇಲ್ಲಿನ ಎಸಿ ನನಗೆ 3 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು… ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ವಿಚಾರವಾಗಿ ಗಂಭೀರ ಆರೋಪ ಮಾಡಿದ ಎಚ್​ಡಿಕೆ, ವರ್ಗಾವಣೆ ತಡೆಯಲು ಕಮಿಷನ್​ ಕೊಡು ಎಸಿ ರಾಮನಗರದ ಜನರನ್ನು ಉಳಿಸುತ್ತಾರಾ? ಅವರಿವರಿಗೆ ಕೊಟ್ಟ ಹಣವನ್ನ ಜನರಿಂದಲೇ ಅವರು ವಸೂಲಿ ಮಾಡಬೇಕಾಗುತ್ತೆ. ಇಲ್ಲಿನ ಅಧಿಕಾರಿಗಳು ಏಜೆಂಟ್​ಗಳ ಮೂಲಕ ಹಣ ಕೊಟ್ಟು ನಂತರ ಜನ್ರ ಜೇಬಿಗೆ ಕೈ ಹಾಕುತ್ತಾರೆಸರ್ಕಾರಕ್ಕೆ ಮರ್ಯಾದೆ ಇದ್ರೆ ಇಂತಹ ಅಧಿಕಾರಿಗಳನ್ನ ಹಿಟ್ಟುಕೊಳ್ಳಲ್ಲ ಎಂದು ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು
ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ವಿರುದ್ಧ ನಾನು ಮಾತನಾಡುತ್ತಿಲ್ಲ. ರಾಜ್ಯದ ಜನತೆ ಮತ್ತು ಬಿಜೆಪಿ ಶಾಸಕರೇ ಆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಇನ್ನು ಸಿ.ಪಿ.ಯೋಗೇಶ್ವರ್ ವಿರುದ್ಧವೂ ಕಿಡಿಕಾರಿದ ಎಚ್​ಡಿಕೆ, ಯೋಗೇಶ್ವರ್ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗ್ತಿದೆ, ಇದನ್ನ ನಾನು ಆರೋಪ ಮಾಡ್ತಿಲ್ಲ ಎಂದರು. ಇನ್ನು ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತಾನಾ? ಯೋಗೇಶ್ವರ್ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ. ಚನ್ನಪಟ್ಟಣಕ್ಕೆ ನಾನು ಚುನಾವಣೆಯಲ್ಲಿ ಹೋಗಿರಲಿಲ್ಲ. ಆದರೂ ಕ್ಷೇತ್ರದ ಜನತೆಯೇ ನನಗೆ ಆಶೀರ್ವಾದ ಮಾಡಿದರು. ಇಂತಹ ಮಂತ್ರಿ ಸ್ಥಾನಗಳನ್ನ ಎಷ್ಟು ನೋಡಿಲ್ಲ ನಾನು ಎಂದು ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜಶೇಖರ್. ಮುಂತಾದವರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!