Sunday, August 14, 2022

Latest Posts

ರಾಮನಗರ: ಕಂದಾಯ ನೌಕರರಿಂದ ಪ್ರತಿಭಟನೆ

ರಾಮನಗರ: ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ನೌಕರರಿಗೆ ಮಾನಸಿಕ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮಂಗಳವಾರವಷ್ಟೇ ತಾಲೂಕಿನ ಲಾಳಾಘಟ್ಟ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಕವಿತಾ ಹೊಸಮನಿ ತಹಸೀಲ್ದಾರ್ ಸಾರ್ವಜನಿಕವಾಗಿ ಬೈದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆ ನೌಕರರು, ತಹಸೀಲ್ದಾರ್ ಅವರನ್ನು ಅಮಾನತ್ತು ಗೊಳಿಸಿ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸ ಬೇಕು ಎಂದು ಆಗ್ರಹಿಸಿದರು. ದಿನದಿಂದ ದಿನಕ್ಕೆ ಕಂದಾಯ ಇಲಾಖೆಯಲ್ಲಿ ನೌಕರರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಇದರಿಂದಾಗಿ ಮಾನಸಿಕ ನೆಮ್ಮದಿ ಕಳೆದು ಕೊಂಡಿದ್ದೇವೆ. ನೆಮ್ಮದಿಯಾಗಿ ಕೆಲಸಮಾಡಲಾಗದ ಪರಿಸ್ಥಿತಿ ನಿರ್ಮಾಣ ಗೊಂಡಿದೆ.

ನೌಕರರ ಮೇಲೆ ವಿನಾಕಾರಣ ಒತ್ತಡ ಹಾಕುತ್ತಿರುವ ಅಧಿಕಾರಿಗಳ ಧೋರಣೆಯಿಂದಾಗಿ ಸಿಬ್ಬಂದಿಗಳು ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಕಂದಾಯ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ಧೌರ್ಜನ್ಯ ನಿಲ್ಲಬೇಕು, ಕಂದಾಯ ನೌಕರರಿಗೆ ಸೂಕ್ತರಕ್ಷಣೆ ಸಿಗಬೇಕು, ಕವಿತಾ ಆಯತ್ಮಹತ್ಯೆ ಯತ್ನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಘಟನೆಗೆ ಸಂಬAಧಿಸಿದAತೆ ನಿಷ್ಪಕ್ಷಾಪಾತ ತನಿಖೆ ನಡೆಯ ಬೇಕು. ಅಲ್ಲಿಯ ವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ನೌಕರರು ಪಟ್ಟು ಹಿಡಿದರು. ತಹಸೀಲ್ದಾರ್ ಮಾತುಕತೆ: ಪ್ರತಿಭಟನಾ ನಿರತ ಕಂದಾಯ ಇಲಾಖೆ ನೌಕರರ ಜತೆ ಮಾತನಾಡಿದ ತಹಸೀಲ್ದಾರ್ ನಾಗೇಶ್, ನಾನು ಕವಿತಾ ಅವರಿಗೆಯಾವುದೇ ರೀತಿಯ ಕಿರುಕುಳ ನೀಡಿಲ್ಲ.

ಲಾಳಾಘಟ್ಟ ಸರ್ವೇನಂಬರ್ ಜಮೀನನ್ನು ಅಕ್ರಮವಾಗಿ ಬಡಾವಣೆ ಮಾಡಿ ಮಾರಾಟ ಮಾಡಲಾಗಿತ್ತು. ಒಂದೂಕಾಲು ಗುಂಟೆ ಭೂಮಿಯನ್ನು ಯಾವ ರೀತಿ ಮಾರಾಟ ಮಾಡಿ,ಖಾತೆ ಮಾಡಿಕೊಡುತ್ತಿದ್ದೀರಿ ಎಂದು ಹಲವಾರು ಸಭೆಗಳಲ್ಲಿ ನನ್ನನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ನಾನು ಅವರನ್ನು ಪ್ರಶ್ನಿಸಿದೆ ಎಂದು ಘಟನೆಯ ಬಗ್ಗೆ ಸ್ಪಷ್ಟಪಡಿಸಿದರು. ಕವಿತಾ ಅವರನ್ನು ಸ್ಥಳಕ್ಕೆ ಕರೆಸಿ, ನಾನು ಅವರಿಗೆ ತೊಂದರೆ ನೀಡಿದ್ದೇನೆ ಎಂದು ಎದುರು ಬದುರುಕೇಳಿ ಎಂದು ಪ್ರತಿಭಟನಾಕಾರರಿಗೆ ತಿಳಿಸಿದ ತಹಸೀಲ್ದಾರ್, ನಾನು ನನ್ನ ಅದೀನ ಸಿಬ್ಬಂದಿಗಳ ಮೇಲೆ ಎಂದೂ ದೌರ್ಜನ್ಯ ನಡೆಸುವುದಿಲ್ಲ. ಆದರೆ, ಕೆಲ ಕೆಲಸ ಮಾಡಿಸಲೇ ಬೇಕಾಗುತ್ತದೆ. ಇದಕ್ಕೆ ಸಿಬ್ಬಂದಿ ಸಹ ಸಹಕಾರ ನೀಡಬೇಕು ಎಂದು ಸ್ಪಷ್ಟಪಡಿಸಿದರು. ಪ್ರತಿಭಟನೆ ಹಿಂದಕ್ಕೆ: ತಹಸೀಲ್ದಾರ್ ಮಾತುಕತೆ ನಡೆಸಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಂದಾಯ ನೌಕರರ ಸಂಘದ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಹರ್ಷ ಗೌಡ, ತಾಲೂಕು ಅಧ್ಯಕ್ಷ ಮೋಹನ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಜಗದೀಶ್, ಪದಾಧಿಕಾರಿಗಳಾದ ಭರತ್, ಬಿಂದುಶ್ರಿ,ಲಿಖತ್, ಕವಿತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss