Thursday, August 11, 2022

Latest Posts

ರಾಮನಗರ| ಕೊರೋನಾ ಸಂಕಷ್ಟದ ನಡುವೆಯೂ ಕೆಂಗಲ್ ದೇವಾಲಯದ ಹುಂಡಿಯಲ್ಲಿ 9.47 ಲಕ್ಷ ಹಣ ಸಂಗ್ರಹ

ರಾಮನಗರ: ತಾಲೂಕಿನ ಪ್ರಸಿದ್ದ ಕೆಂಗಲ್ ಆಂಜನೇಯಸ್ವಾಮಿ ದೇಗುಲಕ್ಕೆ ಕೊರೋನಾ ಲಾಕ್‌ಡೌನ್ ನಡುವೆಯೂ ಉತ್ತಮ ಆದಾಯ ಸಂಗ್ರಹವಾಗಿದ್ದು, ಅನ್‌ಲಾಕ್ ಡೌನ್ ಅವಧಿಯಲ್ಲಿ ದೇವಾಲಯದ ಹುಂಡಿಗೆ 9.47 ಲಕ್ಷ ರೂ. ಹಣ ಸಂಗ್ರಹವಾಗಿದೆ. ಕಳೆದ ಅಂದರೆ 2020ರ ಪೆಬ್ರವರಿಯಿಂದಲೂ ಕೊರೋನಾ ಸಂಕಷ್ಟದಲ್ಲಿ ದೇವಾಲಯ ಬಾಗಿಲು ಬಡೆದಿತ್ತು. ಈತಂಹ ಸಂದಿಗ್ದ ಸಂದರ್ಭದಲ್ಲಿಯೂ ದಾಸೋಹದ 2 ಹುಂಡಿಗಳು, ದೇವಾಲಯದ 4 ಹುಂಡಿಗಳು ಏಣಿಕೆ ಕಾರ್ಯವನ್ನು ನಡೆಸಲಾಯಿತು. ತಾಲ್ಲೂಕು ದಂಡಾಧಿಕಾರಿ ಎಲ್. ನಾಗೇಶ್, ಮುಜರಾಯಿ ಇಲಾಖೆಯ ದಂಡಾಧಿಕಾರಿ ದಯಾನಂದ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಯತಿರಾಜ್ ಹಾಗೂ ಕಸಬಾ ಕಂದಾಯ ನಿರೀಕ್ಷಕ ಕಾಂತರಾಜ್ ಮಾರ್ಗ ದರ್ಶನದಲ್ಲಿ 30ಕ್ಕೂ ಹೆಚ್ಚುಗ್ರಾಮ ಲೆಕ್ಕಿಗರು ಹಾಗೂ ಗ್ರಾಮದ ಸಹಾಯಕರು ಹುಂಡಿ ತೆಗೆದು ಹಣ ಏಣಿಕೆಯಲ್ಲಿ ತೊಡಗಿದರು. ಮುಂಜಾನೆಯಿoದ ಸಂಜೆ 4ರವರೆಗೂ ಏಣಿಕೆ ಕಾರ್ಯವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಏಣಿಕೆ ಕಾರ್ಯದ ವಿಡಿಯೋ ಚಿತ್ರೀಕರಣ ಮಾಡಿದರು. ಗ್ರಾಮಾಂತರ ಪೊಲೀಸರು ಬಂದೋಬಸ್ತ್ ಆಯೋಜಿಸಿದ್ದರು. ಲಾಕ್‌ಡೌನ್ ಆರಂಭಕ್ಕಿoತ ಮುನ್ನಾ ಅಂದರೆ, ಮಾರ್ಚ್ ತಿಂಗಳಲ್ಲಿ ದೇವಾಲಯ ಹುಂಡಿಯನ್ನು ಒಡೆಯಲಾಗಿತ್ತು. ಈ ಸಮಯದಲ್ಲಿ ದೇವಾಲಯದ ಹುಂಡಿಯಲ್ಲಿ 24 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ಮಾರ್ಚ್ 22 ರಿಂದ ಜೂ.8 ರವರೆಗೆ ದೇವಾಲಯಗಳ ಬಾಗಿಲು ತೆರೆದಿರಲಿಲ್ಲ. ಜೂ.8 ರಿಂದ ಬಾಗಿಲು ತೆರೆಯಲು ಆರಂಭಿಸಿದರಾದರೂ ಎಲ್ಲಾ ರೀತಿಯ ಸೇವೆ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯದತ್ತ ಆಗಮಿಸಲು ಆರಂಭಿಸಿದ್ದು ಆಗಸ್ಟ್ ತಿಂಗಳ ಬಳಿಕವೇ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೋಂದು ಹಣ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss