Sunday, June 26, 2022

Latest Posts

ರಾಮನಗರ ಕೋವಿಡ್ ಆಸ್ಪತ್ರೆಯ ಬಾಣಂತಿಯರಿಗೆ ತೊಟ್ಟಿಲು ವಿತರಣೆ

ರಾಮನಗರ: ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಉಪಯೋಗವಾಗಲಿ ಅಂತಾ ಕೆಡಿಪಿ ಸದಸ್ಸರಾದ ಎಂ ರುದ್ರೇಶ್ ರವರ ಸೂಚನೆ ಮೇರೆಗೆ ಬಿಡದಿ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ ತೊಟ್ಟಿಲುಗಳನ್ನ ಹಸ್ತಾಂತರಿಸಿದ್ರು. ರಾಮನಗರದ ತಹಶಿಲ್ದಾರ್ ನರಸಿಂಹಮೂರ್ತಿಗೆ ೫ ತೊಟ್ಟಿಲು ಹಾಗೂ ಮಗುವಿಗೆ ಅಗತ್ಯ ಇರುವ ಬಟ್ಟೆಗಳನ್ನ ಸಹ ಹಸ್ತಾಂತರಿಸಿದ್ರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇರುವ ಸೋಂಕಿತ ಬಾಣಂತಿಯರು ಕಿಟಕಿಗೆ ಸೀರೆಕಟ್ಟಿ ತಮ್ಮ ಹಸುಗುಸುಗಳನ್ನ ಮಲಗಿಸುತ್ತಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿತ್ತು. ಇದನ್ನ ಗಮನಿಸಿದ ಅವರು ಇಂದು ತೊಟ್ಟಿಲು ಹಾಗೂ ಹಾಸಿಗೆ ಪಿಲ್ಲೊಗಳನ್ನ ತಹಶಿಲ್ದಾರ್ ಗೆ ಹಸ್ತಾಂತರಿಸಿದ್ದರು.
ಸೀಲ್ ಡೌನ್ ಹಾಗಿರುವ ಪ್ರದೇಶಗಳಿಗೆ ತೆರಳಿ ದಿನಸಿಕಿಟ್ ಹಾಗೂ ಮಾಸ್ಕ್ ಸ್ಯಾನಿಟೈಸರ್ ಗಳನ್ನ ವಿತರಣೆ ಮಾಡಿ ಮಾತನಾಡಿದ ಅವರು ಕೋವಿಡ್ ಆಸ್ಪತ್ರೆಯಲ್ಲಿ ಇರುವ ಸೋಂಕಿತ ಬಾಣಂತಿಯರು ಕಿಟಕಿಗೆ ಸೀರೆಕಟ್ಟಿ ತಮ್ಮ ಹಸುಗುಸುಗಳನ್ನ ಮಲಗಿಸುತ್ತಿದ್ದು ನಮ್ಮ ಗಮನಕ್ಕೆ ಬಂದಿತ್ತು. ಆದ್ದರಿಂದ ತೊಟ್ಟಿಲುಗಳನ್ನ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಇದ್ರೆ ಇನ್ನಷ್ಟು ತೊಟ್ಟಿಲುಗಳನ್ನ ನೀಡುತ್ತೇವೆ ಎಂದರು.
ರಾಮನಗರದಲ್ಲಿರುವ ಸೀಲ್ ಡೌನ್ ಏರಿಯಾಗಳ ಮನೆಗಳಿಗೆ ದಿನಸಿ ಕಿಟ್ಟುಗಳನ್ನು ಕೂಡ ವಿತರಣೆ ಮಾಡಿದ್ದರು ಮತ್ತು ದಿನಸಿ ಕಿಟ್‌ಗಳ ಜೊತೆಗೆ ಸೋಪು ಮಾಸ್ಕ್ ಸ್ಯಾನಿಟೈಸರ್ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss