Saturday, July 2, 2022

Latest Posts

ರಾಮನಗರ: ಗಣೇಶ ಹಬ್ಬಕ್ಕೂ ತಟ್ಟಿದ‌ ಕೊರೋನಾ ಎಫೆಕ್ಟ್

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಗಣೇಶ ಹಬ್ಬಕ್ಕೂ ಮಂಕು ಅವರಿಸುವಂತೆ ಮಾಡಿದೆ. ಗಣೇಶ ಹಬ್ಬಕ್ಕೆ ತಿಂಗಳ ಮುಂಚೆಯೇ ಬೃಹತ್ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ ಕಂಬಾರ ಕುಟುಂಬಗಳು ಮತ್ತು ಕಲಾವಿದರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ್ ಮೂರ್ತಿಗಳನ್ನು ಸ್ಥಾಪಿಸಲು ಸಿದ್ದತೆ ನಡೆಸುತ್ತಿದ್ದರು. ಈ ಬಾರಿ ಸರ್ಕಾರ ಕೊರೊನಾದಿಂದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಲು ನಿರಾಕರಿಸಿರುವ ಹಿನ್ನಲೆಯಲ್ಲಿ ಹಬ್ಬಕ್ಕೆ ಮಂಕು ಕವಿದಿದೆ.

ಬೃಹತ್ ಗಣೇಶ್ ಮೂರ್ತಿಗಳಿಗೆ ಕಡಿವಾಣ: ಗಣೇಶ ಹಬ್ಬದಲ್ಲಿ ರಸ್ತೆ ರಸ್ತೆಗಳಲ್ಲಿ ಬೃಹತ್ ಗಣೇಶ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸುವ ಪದ್ಧತಿ ಹಿಂದಿನಿ0ದಲು ಇತ್ತು. ಅಂದರೆ ಈ ಬಾರಿ ಇಂತಹ ಸಂಭ್ರಮಗಳಿಗೆ ಕೊರೊನಾ ಕಡಿವಾಣ ಹಾಕಿದೆ. ಕೊರೊನಾ ತೀವ್ರ ಗತಿಯಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಗಣೇಶೋತ್ಸವ ಆಚರಿಸುವ ಸಂಬ0ಧ ಮಾರ್ಗಸೂರ್ಚಿಗಳನ್ನು ಹೊರಡಿಸಿದೆ. ಎಲ್ಲಾ ಮಾರ್ಗಸೂರ್ಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನಸಾಮಾನ್ಯರಲ್ಲಿ ಮನವಿ ಮಾಡಿದೆ.

ಹೀಗಾಗಿ ದೊಡ್ಡ ಗಾತ್ರದ ಮೂರ್ತಿಗಳ ಉತ್ಪಾದನೆಯೇ ಬಂದ್ ಆಗಿದ್ದು, ಮಣ್ಣಿನಲ್ಲಿ ಮಾಡಿದ, ಪರಿಸರಸ್ನೇಹಿ ಪುಟ್ಟ ಗಣಪನ ಮೂರ್ತಿಗಳು ಮನೆಯಂಗಳ ಸೇರಲು ಅಣಿಯಾಗುತ್ತಿವೆ.

ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿರುವ ಮೂರ್ನಾಲ್ಕು ಮನೆಗಳ ಅಂಗಳದಲ್ಲಿ ಈಗಾಗಲೇ ಮಣ್ಣಿನ ಗಣಪಗಳು ಬಿಸಿಲು ಕಾಯುತ್ತಾ ನಿಂತಿವೆ. ಮೂರ್ತಿ ತಯಾರಿಕೆ ಮುಗಿದಿದ್ದು, ಕಲಾವಿದರು ಅವುಗಳಿಗೆ ಬಣ್ಣ ಹಚ್ಚ ತೊಡಗಿದ್ದಾರೆ. ಪ್ರತಿವರ್ಷ ಮನೆಯಲ್ಲಿ ಕೂರಿಸುವ ಸಣ್ಣ ಮೂರ್ತಿಗಳ ಜತೆಗೆ ಸಾರ್ವಜನಿಕ ಉತ್ಸವಗಳಿಗೆಂದೇ ದೊಡ್ಡ ಗಾತ್ರದ ಮೂರ್ತಿಗಳನ್ನೂ ಇಲ್ಲಿ ಸಿದ್ಧ ಪಡಿಸಲಾಗುತಿತ್ತು. ಆದರೆ, ಈ ಬಾರಿ ಕೊರೊನಾ ಮಹಾಮಾರಿ ಕಲಾವಿದರ ಬದುಕಿಗೂ ಸಂಕಷ್ಟ ತಂದೊಡ್ಡಿದೆ. ಬೇಡಿಕೆಯೇ ಇರದ ಕಾರಣ ಇಂತಹ ಮೂರ್ತಿಗಳ ತಯಾರಿಕೆಯನ್ನೇ ಈ ಕುಟುಂಬಗಳು ನಿಲ್ಲಿಸಿವೆ. ಬದಲಾಗಿ ಮನೆಯಲ್ಲಿ ಪ್ರತಿಷ್ಟಾಪಿಸಲು ಅನುವಾಗುವಂತೆ ಸಣ್ಣ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಹಬ್ಬ ಹತ್ತಿರವಾದಂತೆ ಇವುಗಳಿಗೆ ಬೇಡಿಕೆಯೂ ಬರತೊಡಗಿದೆ.

ಪರಿಸರ ಸ್ನೇಹಿ: ಬನ್ನಿಕುಪ್ಪೆ ಗ್ರಾಮದಲ್ಲಿನ ಈ ಕುಟುಂಬಗಳು ಹಲವು ತಲೆಮಾರುಗಳಿಂದಲೂ ಗೌರಿ-ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಹಬ್ಬಕ್ಕೆ ಮೂರು ತಿಂಗಳು ಮುಂಚೆಯೇ ಊರಿನ ಕೆರೆಯಿಂದ ಜೇಡಿ ಮಣ್ಣು ತಂದು, ಅದನ್ನು ಹದ ಮಾಡಿ ಮೂರ್ತಿ ತಯಾರಿಕೆ ಆರಂಭಿಸುತ್ತಾರೆ.

ಹಬ್ಬ ಸಮೀಪಿಸಿದಂತೆಲ್ಲ ಕೆಲಸ ಹೆಚ್ಚುತ್ತ ಹೋಗುತ್ತದೆ. ಮನೆ ಮಹಿಳೆಯರು, ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಇಲ್ಲಿನ ವಿಶೇಷ. ಅಂತೆಯೇ ಪರಿಸರಕ್ಕೆ ಹಿತವಾದ ಬಣ್ಣಗಳನ್ನೇ ಕಲಾವಿದರು ಬಳಸುತ್ತ ಬಂದಿದ್ದಾರೆ. ರಾಮನಗರ, ಚನ್ನಪಟ್ಟಣ ಮೊದಲಾದ ತಾಲ್ಲೂಕುಗಳ ನಾನಾ ಊರುಗಳ ಜನರು ಪ್ರತಿ ವರ್ಷ ಇಲ್ಲಿಗೇ ಬಂದು ಮೂರ್ತಿ ಖರೀದಿ ಮಾಡಿ ಹೋಗುತ್ತಾರೆ. ಕೆಲವರು ತಿಂಗಳಿಗೆ ಮುಂಚೆಯೇ ಬೇಡಿಕೆ ಸಲ್ಲಿಸಿ ಹೋಗುತ್ತಾರೆ.

ಕೈಹಿಡಿಯಷ್ಟು ಪುಟ್ಟ ಗಾತ್ರದ ಗೌರಿಗೆ ೧೦-೨೦ ಬೆಲೆಯಿಂದ ಹಿಡಿದು ದೊಡ್ಡ ಸೊಂಡಿಲು, ಹಾವಿನ ಹೆಡೆ ಹೊತ್ತ ದೊಡ್ಡ ಗಾತ್ರದ ಗಣಪನ ಮೂರ್ತಿಗೆ೫ ಸಾವಿರದವರೆಗೂ ಬೆಲೆ ಇದೆ. ಕೊಡುವ ಹಣದ ಮೌಲ್ಯಕ್ಕೆ ತಕ್ಕಂತೆ ಮೂರ್ತಿಗಳ ಗಾತ್ರವೂ ಹೆಚ್ಚುತ್ತ ಹೋಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss