ರಾಮನಗರ: ಅಕ್ರಮವಾಗಿ ಜಮೀನೊಂದರಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪಿನ ಗಿಡಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹಾರೋಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಹೊನ್ನಯ್ಯನದೊಡ್ಡಿ ಗ್ರಾಮದ ರೇಷ್ಮೆ ಕಡ್ಡಿ ತೋಟದಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ಮಂಗಳವಾರ ವಶಪಡಿಸಿಕೊಂಡು ಆರೋಪಿ ಅದೇ ಗ್ರಾಮದ ಚಂದ್ರ ಬಿನ್ ಭೀಮಯ್ಯನನ್ನು ಹಿಡಿದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಾರೋಹಳ್ಳಿ ಸರ್ಕಲ್ ಇನ್ಸೆ÷್ಪಕ್ಟರ್ ಸತೀಶ್ ಮತ್ತು ಸಬ್ ಇನ್ಸೆ÷್ಪಕ್ಟರ್ ರವಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಸುಮಾರು ೫.೫ ಕೆಜಿ ಗಾಂಜಾ ಬೆಳೆಯನ್ನು ವಶಕ್ಕೆ ಪಡೆದಿದ್ದಾರೆ.