Tuesday, June 28, 2022

Latest Posts

ರಾಮನಗರ: ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಅವಕಾಶ ನೀಡುವಂತೆ ಸಾರ್ವಜನಿಕರ ಒತ್ತಾಯ

ರಾಮನಗರ: ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಯು ವಿಹಾರಿಗಳು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದ ಬಳಿ  ಬೆಳಗ್ಗೆ ಜಮಾಯಿಸಿದ ವಾಯು ವಿಹಾರಗಳು, ಲಾಕ್ ಡೌನ್ ತರವುಗೊಂಡು ಹಲವು ತಿಂಗಳು ಕಳೆದರೂ ಇಲ್ಲಿನ ಕ್ರೀಡಾಧಿಕಾರಿ ಹಿರಿಯ ನಾಗರಿಕರು ಹಾಗೂ ಸಾರ್ವ ಜನಿಕರಿಗೆ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ಧೋರಣೆ ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಯು ವಿಹಾರಿಗಳ ಒಕ್ಕೂಟದ ಮುಖಂಡ ವೆಂಕಟೇಶ್, ಈ ತಿಂಗಳ ೭ರಿಂದ ಜಿಲ್ಲಾ ಕ್ರೀಡಾಂಗಣ ತೆರೆಯಲು ಜಿಲ್ಲಾಧಿಕಾರಿಗಳು ಕ್ರೀಡಾ ಇಲಾಖೆಗೆ ಸೂಚನೆ ನೀಡಿದ್ದರೂ ತಮ್ಮ ಉದ್ಧಟತನ ಮುಂದುವರಿಸಿರುವ ಕ್ರೀಡಾ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸೂಚನೆಯನ್ನೇ ಧಿಕ್ಕರಿಸಿದಾರೆ ಎಂದು ಆರೋಪಿಸಿದರು.

ವಾಯು ವಿಹಾರಿ ಕುಮಾರ್ ಮಾತನಾಡಿ, ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಘು ವ್ಯಾಯಾಮ ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು,¬ ಕ್ರೀಡಾ ಇಲಾಖೆ ಅಧಿಕಾರಿಗಳು ವಾಯು ವಿಹಾರಕ್ಕೆ ಬರುವವರನ್ನು ಇಲ್ಲ ಸಲ್ಲದ ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ದಿಕ್ಕಿನಲ್ಲಿ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಇಲ್ಲಿನ ಕ್ರೀಡಾಧಿಕಾರಿಗಳಿಗೆ ಆದೇಶ ನೀಡಿ, ಬೆಳಗ್ಗೆ ಮತ್ತು ಸಂಜೆ ವೇಳೆ ವಾಯು ವಿಹಾರಿಗಳಿಗೆ ಜಿಲ್ಲಾ ಕ್ರೀಡಾಂಗಣ ದಲ್ಲಿ ಅವಕಾಶ ಕಲ್ಪಿಸಿಕೊಡಬೇಕು.

ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶಾಂತಿಯುತ ಹೋರಾಟದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸಳೆದು ಸಂಬ0ಧ ಪಟ್ಟ ಅಧಿಕಾರಿಗಳಿಗೆ ಛೀಮಾರಿ ಇಲ್ಲಿಂದ ಎತ್ತಂಗಡಿ ಮಾಡಿಸಲಾಗುವುದು ಎಂದು ಎಚ್ಚರಿಸಿದರು. ವಾಯು ವಿಹಾರಿಗಳಾದ ತನ್ವಿರ್, ರಾಮದಾಸ್, ಮಲವಯ್ಯ, ಕುಮಾರ್, ಡಿಪೋ ಚಿಕ್ಕಣ್ಣ, ದೊಡ್ಡಿ ಸುರೇಶ್, ಯಕ್ಷ ರಾಜ್, ಶಂಕರ್ ರಾವ್ ಇನ್ನು ಮುಂತಾದವರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss