Wednesday, August 17, 2022

Latest Posts

ರಾಮನಗರ: ಜಿಲ್ಲಾ ಪಂಚಾಯತ್ ವಿಶೇಷ ಸಭೆ

ರಾಮನಗರ : ರಾಮನಗರ ಜಿಲ್ಲಾ ಪಂಚಾಯತ್‌ನ ಮೂರನೇ ಅವಧಿಯ ಸ್ಥಾಯಿ ಸಮಿತಿ ರಚನೆ ಮಾಡಲು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಸಭೆ ನಡೆಸಲಾಯಿತು.

ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ ಅಧ್ಯಕ್ಷರಾಗಿ ಹೆಚ್.ಆರ್ ಬಸಪ್ಪ ಸಿ.ಪಿ ರಾಜೇಶ್, ಎಂ.ಎನ್ ನಾಗರಾಜು. ಎಸ್ ಗಂಗಾಧರ್, ಶಿವಕುಮಾರ್, ಅಶೋಕ್, ಅವರು ಸಮಿತಿ ಸದಸ್ಯರಾಗಿರುತ್ತಾರೆ. ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಷಾರವಿ ಅವರು ಆಯ್ಕೆಯಾಗಿದ್ದು, ನಾಗರತ್ನ, ಶಿವಕುಮಾರ್, ದಿವ್ಯಗಂಗಾಧರ್, ಚಂದ್ರಮ್ಮ ಅವರು ಸಮಿತಿ ಸದಸ್ಯರಾಗಿತ್ತಾರೆ.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಭಾಗ್ಯ ಶಾಂತರಾಜು ಅವರು ಆಯ್ಕೆಯಾಗಿದ್ದು, ಹೆಚ್.ಕೆ ನಾಗರಾಜು, ನಾಗರತ್ನ ಶಿವಣ್ಣ, ಪ್ರಸನ್ನಕುಮಾರ್, ಅಣ್ಣೇಗೌಡ,ನಾಜೀಯಾ ಖಾನಮ್ಮ ಅವರು ಸಮಿತಿಯ ಸದಸ್ಯರಾಗಿರುತ್ತಾರೆ. ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಆರ್. ಶಂಕರ್ ಆಯ್ಕೆಯಾಗಿದ್ದು, ನಾಜೀಯಾ ಖಾನಮ್ಮ, ಎಂ.ಎನ್ ಮಂಜುನಾಥ್, ಪ್ರಭಾವತಿ ಶಿವಲಿಂಗಯ್ಯ, ವೀಣಾಕುಮಾರಿ, ಜಯರತ್ನಮ್ಮ, ಚಂದ್ರಮ್ಮ, ನಂಜಯ್ಯ ಅವರು ಸಮಿತಿ ಸದಸ್ಯರಾಗಿರುತ್ತಾರೆ.

ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷರಾಗಿ ಸುಗುಣ ತಿಮ್ಮಪ್ಪರಾಜು ಅವರು ಆಯ್ಕೆಯಾಗಿದ್ದು, ಪ್ರಸನ್ನ ಕುಮಾರ್, ದಿವ್ಯ ಗಂಗಾಧರ್, ನಾಗರತ್ನ ಚಂದ್ರೇಗೌಡ, ವೀಣಾ ಚಂದ್ರು ಅವರು ಸಮಿತಿ ಸದಸ್ಯರಾಗಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!