ರಾಮನಗರ: ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಮನಗರ ಜಿಲ್ಲೆಯು ‘ಎ’ ದರ್ಜೆಯ ಗರಿ ಪಡೆದಿದೆ.
ಒಟ್ಟಾರೆ ಶೇ ೮೮.೮೮ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಕಳೆದ ವರ್ಷವೂ ಇದೇ ಪ್ರಮಾಣದ ಫಲಿತಾಂಶ ಬಂದಿತ್ತು. ಆದರೆ ಶಿಕ್ಷಣ ಇಲಾಖೆ ಪಟ್ಟಿ ಮಾಡಿರುವ ಎ ದರ್ಜೆಯ ಜಿಲ್ಲಾವಾರು ಪಟ್ಟಿಯಲ್ಲಿ ರಾಮನಗರವು ಎಂಟನೇ ಸ್ಥಾನದಲ್ಲಿದೆ. ಜಿಲ್ಲೆಯು ಕಳೆದ ವರ್ಷ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿ ಇತ್ತು. ಜಿಲ್ಲೆಯಲ್ಲಿ ಈ ವರ್ಷ ಒಟ್ಟು ೧೨,೫೪೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಈ ಬಾರಿಯ ಫಲಿತಾಂಶವನ್ನು ಸರ್ಕಾರವು ಗ್ರೇಡ್ ಪ್ರಮಾಣದ ಮೂಲಕ ಅಳೆಯುವ ನೀತಿಯನ್ನು ತಂದಿದೆ. ಅದರಂತೆ ಜಿಲ್ಲೆಯ ಚನ್ನಪಟ್ಟಣ ಹಾಗು ಮಾಗಡಿ ತಾಲೂಕುಗಳು ಎ ಗ್ರೇಡ್ ಪಡೆದಿದ್ದರೆ, ಕನಕಪುರ ಹಾಗು ರಾಮನಗರ ತಾಲೂಕು ಬಿ ಗ್ರೇಡ್ ಪಡೆದುಕೊಂಡಿವೆ.
ಜಿಲ್ಲೆಯ ೭೦ ಸರ್ಕಾರಿ ಶಾಲೆಗಳು, ೩೮ ಅನುದಾನಿತ ಶಾಲೆಗಳು ಹಾಗೂ ೭೭ ಖಾಸಗಿ ಶಾಲೆಗಳು ಎ ದರ್ಜೆಯ ಫಲಿತಾಂಶ ಪಡೆದುಕೊಂಡಿವೆ. ೩೬ ಸರ್ಕಾರಿ ಶಾಲೆ, ೨೪ ಅನುದಾನಿತ ಶಾಲೆ, ೧೬ ಖಾಸಗಿ ಶಾಲೆಗಳು ಬಿ ಗ್ರೇಡ್ನಲ್ಲಿವೆ. ೧೮ ಸರ್ಕಾರಿ ಶಾಲೆ, ೭ ಅನುದಾನಿತ ಶಾಲೆ, ೫ ಖಾಸಗಿ ಶಾಲೆಗಳು ಸಿ ದರ್ಜೆಗೆ ತೃಪ್ತಿ ಪಟ್ಟುಕೊಂಡಿವೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ ೬೫ ಪ್ರೌಢಶಾಲೆಗಳಿದ್ದು, ಇದರಲ್ಲಿ ೫೬ ಶಾಲೆಗಳು ಎ ದರ್ಜೆ, ೬ ಶಾಲೆಗಳು ಬಿ ದರ್ಜೆ ಹಾಗೂ ೩ ಶಾಲೆ ಸಿ ಗ್ರೇಡ್ ಪಡೆದಿವೆ. ಮಾಗಡಿ ತಾಲ್ಲೂಕಿನ ೬೬ ಶಾಲೆಗಳಲ್ಲಿ ೫೨ ಶಾಲೆಗಳು ಎ ದರ್ಜೆ, ೧೩ಶಾಲೆಗಳು ಬಿ ದರ್ಜೆ, ೧ ಶಾಲೆ ಸಿ ದರ್ಜೆ ಪಡೆದಿದೆ. ಕನಕಪುರ ತಾಲ್ಲೂಕಿನ ೭೯ ಶಾಲೆಗಳಲ್ಲಿ ೩೭ ಶಾಲೆಗಳು ಎ ದರ್ಜೆ, ೩೧ ಶಾಲೆ ಬಿ ಹಾಗು ೧೧ ಶಾಲೆಗಳು ಸಿ ದರ್ಜೆ ಪಡೆದುಕೊಂಡಿವೆ. ರಾಮನಗರ ತಾಲೂಕಿನ ೮೧ ಶಾಲೆಗಳ ಪೈಕಿ ೪೦ ಶಾಲೆಗಳು ಎ ದರ್ಜೆ, ೨೬ ಶಾಲೆಗಳು ಬಿ ಹಾಗು ೧೫ ಶಾಲೆಗಳು ಸಿ ದರ್ಜೆ ಫಲಿತಾಂಶ ದಾಖಲಿಸಿವೆ.
ಮೊದಲ ಐದು ಸ್ಥಾನ ಪಡೆದವರು:- ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಎಸ್.ಡಿ. ಪ್ರಜ್ಞಾ ೬೨೦ ಅಂಕ ಪಡೆಯುವ ಜಿಲ್ಲೆಗೆ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಮಾಗಡಿಯ ಮಾರುತಿ ಪಬ್ಲಿಕ್ ಶಾಲೆಯ ಜಿ.ಎಸ್. ಪುರುಷೋತ್ತಮ್ ಹಾಗು ಕನಕಪುರ ತಾಲೂಕಿನ ಜಕ್ಕಸಂದ್ರದ ಜೈನ್ ವಿದ್ಯಾನಿಕೇತನ್ ಶಾಲೆಯ ಸಿ. ಸಾತ್ವಿಕ್ ೬೧೯ ಅಂಕಗಳೊAದಿಗೆ ದ್ವಿತೀಯ ಸ್ಥಾನ ಹಂಚಿಕೊ0ಡಿದ್ದಾರೆ.
ರಾಮನಗರದ ಹೋಲಿಕ್ರೆಸೆಂಟ್ ಶಾಲೆಯ ಎ.ಎನ್. ಜೀವಿತಾ ರಾಣಿ ಹಾಗು ಕನಕಪುರದ ಸೇಂಟ್ ಮೈಕಲ್ ಶಾಲೆಯ ಎಂ. ಸಂಗೀತಾ ೬೧೮ ಅಂಕಗಳೊ0ದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.