Sunday, August 14, 2022

Latest Posts

ರಾಮನಗರ ಜಿಲ್ಲೆಯಲ್ಲಿ ಇಂದು 123 ಕೊರೋನಾ ಪ್ರಕರಣ ದೃಢ, 105 ಜನರು ಗುಣಮುಖ

ರಾಮನಗರ:  ಜಿಲ್ಲೆಯಲ್ಲಿ ಚನ್ನಪಟ್ಟಣ 37, ಕನಕಪುರ 15, ಮಾಗಡಿ 31 ಮತ್ತು ರಾಮನಗರ 40 ಪ್ರಕರಣಗಳು ಸೇರಿ ಇಂದು ಒಟ್ಟು 123 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.
ಒಟ್ಟು ಪ್ರಕರಣ: ಇದುವರೆಗೆ ಜಿಲ್ಲೆಯಲ್ಲಿ 3001 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 757, ಕನಕಪುರ 630, ಮಾಗಡಿ 453 ಮತ್ತು ರಾಮನಗರ 1161 ಪ್ರಕರಣಗಳು ಸೇರಿವೆ.
ಸಾವು: ಇಂದು ಕನಕಪುರ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 6, ಕನಕಪುರ ತಾಲ್ಲೂಕಿನಲ್ಲಿ 9, ಮಾಗಡಿ ತಾಲ್ಲೂಕಿನಲ್ಲಿ 11 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 36 ಮಂದಿ ನಿಧನರಾಗಿದ್ದಾರೆ.
ಗುಣಮುಖ : ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ 32, ಕನಕಪುರ ತಾಲ್ಲೂಕಿನಲ್ಲಿ 17, ಮಾಗಡಿ ತಾಲ್ಲೂಕಿನಲ್ಲಿ 08 ಹಾಗೂ ರಾಮನಗರ ತಾಲ್ಲೂಕಿನಲ್ಲಿ 48 ಜನ ಸೇರಿ ಒಟ್ಟಾರೆ 105 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 2015 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 482, ಕನಕಪುರ 429, ಮಾಗಡಿ 314 ಮತ್ತು ರಾಮನಗರ 790 ಜನರು ಸೇರಿದ್ದಾರೆ.
ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 3001 ಪ್ರಕರಣಗಳ ಪೈಕಿ 2015 ಜನರು ಗುಣಮುಖರಾಗಿದ್ದಾರೆ, ಇನ್ನೂ 950 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 950 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 269, ಕನಕಪುರ 192, ಮಾಗಡಿ 128 ಮತ್ತು ರಾಮನಗರ 361 ಪ್ರಕರಣಗಳು ಸೇರಿವೆ.
ಜಿಲ್ಲಾ ಆರೋಗ್ಯ ಇಲಾಖೆ ವರದಿ : ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಗುರುವಾರ (ಆ. 27) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 27492 (ಹೊಸದಾಗಿ ಇಂದಿನ 868 ಸೇರಿ).
ಜ್ವರ ತಪಾಸಣೆ: ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 111 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 5326 ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ.
ಕ್ವಾರAಟೈನ್: ಒಟ್ಟು 9 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸ್ಟ್ಯೂಷನಲ್ ಕ್ವಾರೆಂಟೈನ್ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.
ಮಾದರಿ ಸಂಗ್ರಹ: ಇಂದು ಹೊಸದಾಗಿ 868 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 27751 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 23889 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಇಂದಿನ 372 ಬಾಕಿ ವರದಿ ಸೇರಿ ಒಟ್ಟು 825 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss