Tuesday, July 5, 2022

Latest Posts

ರಾಮನಗರ ಜಿಲ್ಲೆಯಲ್ಲಿ 3 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿ

ರಾಮನಗರ: ಜಿಲ್ಲೆಯಲ್ಲಿ 3 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.
ಚನ್ನಪಟ್ಟಣ ೨ ಮತ್ತು ಮಾಗಡಿ ೧ ಪ್ರಕರಣ ಪತ್ತೆಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ ೩೯೩ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ ೮೫, ಮಾಗಡಿ ೧೩೭, ಚನ್ನಪಟ್ಟಣ ೭೪ ಮತ್ತು ರಾಮನಗರದ ೯೭ ಪ್ರಕರಣಗಳು ಸೇರಿವೆ.
ಜಿಲ್ಲೆಯಲ್ಲಿ ದಾಖಲಾಗಿರುವ ೩೯೩ ಪ್ರಕರಣಗಳ ಪೈಕಿ ೨೫೦ ಜನರು ಗುಣಮುಖರಾಗಿದ್ದರೆ, ಇನ್ನೂ ೧೩೪ ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕನಕಪುರ ೩, ಮಾಗಡಿ ೬೦, ಚನ್ನಪಟ್ಟಣ ೩೫ ಮತ್ತು ರಾಮನಗರದ ೩೬ ಪ್ರಕರಣಗಳು ಸೇರಿವೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೫೦ ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಕನಕಪುರ ೮೫, ಮಾಗಡಿ ೬೯, ಚನ್ನಪಟ್ಟಣ ೩೯ ಮತ್ತು ರಾಮನಗರದ ೬೦ ಜನರು ಸೇರಿದ್ದಾರೆ.
ಒಟ್ಟಾರೆ ರಾಮನಗರದಲ್ಲಿ ಒಬ್ಬರು ಹಾಗೂ ಮಾಗಡಿಯಲ್ಲಿ ೮ ಜನ ಮೃತ ಪಟ್ಟಿದ್ದು, ಮೃತರ ಸಂಖ್ಯೆ ೯ಕ್ಕೆ ಏರಿಕೆಯಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬoಧಿಸಿದoತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಬುಧವಾರ (ಜುಲೈ ೧೫) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧೨೮೨೭ (ಹೊಸದಾಗಿ ಇಂದಿನ ೨೮೬ ಸೇರಿ). ಒಟ್ಟು ೪೫೧೧ ಜನ ೧೪ ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. ೨೬೪ ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ ೩೮೬೪ಗೆ ಏರಿಕೆಯಾಗಿದೆ.
ಜ್ವರ ತಪಾಸಣೆಃ ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು ೫೧ ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ ೩೬೨೩ ಮಂದಿ ತಪಾಸಣೆಗೆ ಮಾಡಿಸಿಕೊಂಡಿದ್ದಾರೆ.
ಕ್ವಾರoಟೈನ್ ಒಟ್ಟು ೯ ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ ಇಂದು ೧೯ ಜನ ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ ೩೨೧ಕ್ಕೆ ಏರಿಕೆಯಾಗಿದೆ.
ಮಾದರಿ ಸಂಗ್ರಹಃ ಹೊಸದಾಗಿ ೨೮೬ ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು ೧೩೧೭೧ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು ೧೦೭೪೩ ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ೨೮೬ ಬಾಕಿ ವರದಿ ಸೇರಿ ಒಟ್ಟು ೧೭೭೨ ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪದ್ಮಾವತಿ ನರ್ಸಿಂಗ್ ಹೋಂನ ವೈದ್ಯನಿಗೆ ಕೊರೊನಾ
ಕುವೆಂಪುನಗರದ ೨ನೇ ಅಡ್ಡರಸ್ತೆಯ ಪದ್ಮಾವತಿ ನರ್ಸಿಂಗ್ ಹೋಂನ ವೈದ್ಯರೊರ್ವರಿಗೆ ಪಾಸಿಟಿವ್ ಪತ್ತೆಯಾಗಿರುವುದರಿಂದ ಆಸ್ಪತ್ರೆಯ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಾಗೂ ನಗರದಲ್ಲಿ ಜನಪ್ರಿಯತೆ ಗಳಿಸಿದ್ದ ಫಿಜಿಷಿಯನ್ ವೈದ್ಯರಿಗೆ ಸೊಂಕು ತಗುಲಿರುವುದು ಖಾತ್ರಿಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿನ ಒಳರೋಗಿ ಹಾಗೂ ಹೊರ ರೋಗಿಗಳು ಭಯಭೀತಿಗೊಂಡಿದ್ದಾರೆ.
ವೈದ್ಯರಿಗೆ ಸೋಂಕು ತಗುಲಿರುವುದು ಎಲ್ಲಿಂದ ಎಂದು ಊಹಿಸಲಾಗದಿದ್ದು, ಪ್ರತಿನಿತ್ಯ ೧೦೦ ರಿಂದ ೨೦೦ ಮಂದಿ ವಿವಿಧ ರೋಗಿಗಳನ್ನು ಇವರು ತಪಾಸಣೆ ಮಾಡುತ್ತಿದ್ದರೆಂದು ಹೇಳಲಾಗಿದೆ. ಪರೀಕ್ಷೆಗೆ ಒಳಪಡುವ ರೋಗಿಯಿಂದಲೇ ಸೋಂಕು ತಗುಲಿರಬಹುದೆಂದು ಅನುಮಾನಿಸಲಾಗಿದೆ.
ಪಾಸಿಟಿವ್ ಹೊಂದಿರುವ ವೈದ್ಯರನ್ನು ಕೂಡಲೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸೋಂಕಿತರಿoದ ಪ್ರಥಮ ಸಂಪರ್ಕ ಹೊಂದಿರುವವರು ಕ್ವಾರಂಟೈನ್ ಮಾಡಲಾಗಿದ್ದು, ಇವರ ಬಳಿ ಬಂದಿದ್ದ ಸಾವಿರಾರು ಮಂದಿಯನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಹಾಗೂ ಪೋಷಕರು ಕಾಯೋನ್ಮುಖರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss