Wednesday, August 10, 2022

Latest Posts

ರಾಮನಗರ: ಜಿ.ಪಂ. ಮೂರನೇ ಅವಧಿಗೆ ಸದಸ್ಯರ ಆಯ್ಕೆ 

ರಾಮನಗರ: ರಾಮನಗರ ಜಿಲ್ಲಾ ಪಂಚಾಯತ್‌ನ ಮೂರನೇ ಅವಧಿಗೆ 5 ಸ್ಥಾಯಿ ಸಮಿತಿಗಳನ್ನು ರಚಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದೇಶಿಸಿರುತ್ತಾರೆ. ಸ್ಥಾಯಿ ಸಮಿತಿಗಳ ಅವಧಿಯು 2020ರ ಆಗಸ್ಟ್ 5 ರಿಂದ ಪ್ರಾರಂಭವಾಗಿ 2021ರ ಏಪ್ರಿಲ್ 28ರವರೆಗೆ ಅಥವಾ ಜಿಲ್ಲಾ ಪಂಚಾಯತ್ ಸದಸ್ಯರು ಸದಸ್ಯನಾಗಿರುವುದು ನಿಂತುಹೋಗುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಸಮಿತಿಗಳು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 187ರಂತೆ ಕರ್ತವ್ಯ ನಿರ್ವಹಿಸುವುದು. ಸಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ.ವಿ ಉಷಾರವಿ, ಎಸ್. ಸದಸ್ಯರುಗಳಾಗಿ ಎಸ್. ನಾಗರತ್ನ ಶಿವಣ್ಣ, ಶಿವಕುಮಾರ್, ಬಿ.ಎನ್. ದಿವ್ಯಗಂಗಾಧರ್, ಚಂದ್ರಮ್ಮ ನಂಜಯ್ಯ ಹಾಗೂ ಡಿ.ಎಚ್. ಜಯರತ್ನ ಅವರು ಆಯ್ಕೆಯಾಗಿರುತ್ತಾರೆ. ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ ಅಧ್ಯಕ್ಷರಾಗಿ ಹೆಚ್.ಆರ್ ಬಸಪ್ಪ, ಸದಸ್ಯರುಗಳಾಗಿ ಸಿ.ಪಿ ರಾಜೇಶ್, ಎಂ.ಎನ್ ನಾಗರಾಜು. ಎಸ್ ಗಂಗಾಧರ್, ಶಿವಕುಮಾರ್, ಎಚ್.ಎನ್. ಅಶೋಕ್ ಅವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಭಾಗ್ಯ ಅವರು ಆಯ್ಕೆಯಾಗಿದ್ದು, ಹೆಚ್.ಕೆ ನಾಗರಾಜು, ಎಸ್. ನಾಗರತ್ನ ಶಿವಣ್ಣ, ಪ್ರಸನ್ನಕುಮಾರ್ ಎಲ್, ಅಣ್ಣೇಗೌಡ ಹಾಗೂ ನಾಜೀಯಾ ಖಾನಮ್ಮ ಅವರು ಸಮಿತಿಯ  ಸದಸ್ಯರಾಗಿರುತ್ತಾರೆ.
ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಶಂಕರ್ ಅವರು ಆಯ್ಕೆಯಾಗಿದ್ದು, ಎಂ.ಎನ್ ಮಂಜುನಾಥ್,  ನಾಜೀಯಾ ಖಾನಂ, ಪ್ರಭಾವತಿ ಶಿವಲಿಂಗಯ್ಯ, ಡಿ.ಹೆಚ್. ಜಯರತ್ನ, ಜಿ.ಡಿ ವೀಣಾಕುಮಾರಿ ಅವರು ಸಮಿತಿ ಸದಸ್ಯರಾಗಿರುತ್ತಾರೆ.
ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷರಾಗಿ ಎನ್. ಸುಗುಣ,  ಪ್ರಸನ್ನ ಕುಮಾರ್ ಎಲ್, ಪ್ರಭಾವತಿ ಶಿವಲಿಂಗಯ್ಯ, ಬಿ.ಎನ್. ದಿವ್ಯಗಂಗಾಧರ್, ನಾಗರತ್ನ ಚಂದ್ರೇಗೌಡ, ಜಿ.ಡಿ. ವೀಣಾಕುಮಾರಿ ಅವರು ಸಮಿತಿ ಸದಸ್ಯರಾಗಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss