Tuesday, July 5, 2022

Latest Posts

ರಾಮನಗರ: ಜೆಡಿಎಸ್ ಕಾರ್ಯಕರ್ತರ ನಡುವೆ ವಾಕ್ಸಮರ

ಹೊಸದಿಗಂತ ವರದಿ ರಾಮನಗರ:

ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಎದುರೇ ಪಕ್ಷದ ಕಾರ್ಯಕರ್ತರು ಕೈಕೈ ಮಿಲಾಯಿಸಿ, ಹೊಡೆದಾಟ ಮಾಡಿಕೊಂಡ ಘಟನೆ, ತಾಲ್ಲೂಕಿನ ಅಬ್ಬೂರು ಗ್ರಾಮದಲ್ಲಿ ಎದುರಾಯಿತು.
ಕಳೆದ ಮೂರು ದಿನಗಳಿಂದ ಕ್ಷೇತ್ರದ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು, ಅಬ್ಬೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ, ಹೈಮಾಸ್ ವಿದ್ಯುತ್ ದೀಪ ಅಳವಡಿಕೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ,ಶಂಕುಸ್ಥಾಪನೆ ಮಾಡಿ. ಗ್ರಾಮದ ದೇವಾಲಯದಲ್ಲಿ ಗ್ರಾಮದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ, ಕುಮಾರಸ್ವಾಮಿರವರ ಸಮಕ್ಷಮದಲ್ಲಿಯೇ ಈ ಘಟನೆ ನಡೆದು, ಒಂದು ಕ್ಷಣ ಅವಕ್ಕಾದರು. ಕೆಲ ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಗ್ರಾಮದಲ್ಲಿ ಜೆಡಿಎಸ್ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿ, ಜೆ.ಡಿ.ಎಸ್.ನಲ್ಲಿಯೇ ಬಿನ್ನಮತ ಸ್ಪೋಟಗೊಂಡು, ಅದಿಕೃತ ಜೆ.ಡಿ.ಎಸ್.ಬೆಂಬಲಿತ ಅಭ್ಯರ್ಥಿಗಳಾಗದೆ, ಬಂಡಾಯ ಜೆ.ಡಿ.ಎಸ್.ಅಭ್ಯರ್ಥಿಗಳಾಗಿ ಇಬ್ಬರು ಕಣದಲ್ಲಿದ್ದ,ಪರಿಣಾಮ ಇಬ್ಬರು ಅಭ್ಯರ್ಥಿಗಳು ಪರಾಭವಗೊಂಡು, ಮೂರನೇಯ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಲು ಕಾರಣವಾಗಿದ್ದು ಹಾಗೂ ಗ್ರಾಮದಲ್ಲಿ ಬಿನ್ನಮತ ಜೆಡಿಎಸ್ ಬಣಗಳು ಹಾಕಿದ್ದ ಬ್ಯಾನರ್‌ಗಳು ಕೂಡ ಈ ಘಟನೆಗೆ ಸಾಕ್ಷಿಯಾಯಿತು. ಗ್ರಾಮದ ಜನತೆಯನ್ನು ಉದ್ದೇಶಿಸಿ ಮಾತನಾಡುವ ಮುಂಚೆಯೇ ತಗಾದೆ ತಗೆದ, ಒಂದೇ ಪಕ್ಷದ ಎರಡು ಬಣದ ಕಾರ್ಯಕರ್ತರು, ಅವರವರ ಮೇಲೆ ಆರೋಪಗಳನ್ನು ಮಾಡಿಕೊಂಡರು ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆ.ರವರು, ಸಮಾದಾನ ಪಡಿಸಲು ಯತ್ನಸಿದರೂ ಪ್ರಯೋಜನವಾಗದೆ, ಏಕಾಎಕಿ ಅವರವರ ಕತ್ತಿನಪಟ್ಟಿಗೆ ಕೈ ಹಾಕಿ ಹೊಡೆದಾಟ ಮಾಡಿಕೊಂಡರು. ಮಾಜಿ ಮುಖ್ಯಮಂತ್ರಿ ಹಾಗೂ ನೆಚ್ಚಿನ ಶಾಸಕ ಕುಮಾರಸ್ವಾಮಿರವರನ್ನು ನೋಡಲು ನಿಂತ್ತಿದ್ದ ಗ್ರಾಮದ ಜನರಲ್ಲಿ ಅದರಲ್ಲೂ ಮಹಿಳೆಯರಿಗೆ ಕಾರ್ಯಕರ್ತರ ಹೊಡೆದಾಟದಿಂದ ಭಯಭೀತಿಗೊಂಡರು, ಅಲ್ಲದೆ ಹೊಡೆದಾಟ ಅತಿರೇಕಕ್ಕೆ ಹೋಗುವ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಪೊಲೀಸರು ಹೊಡೆದಾಟವನ್ನು ನಿಯಂತ್ರಣಕ್ಕೆ ತಂದರೂ, ಮಳೆನಿಂತ್ತರೂ ಮರದ ಹನಿ ನಿಲ್ಲುವುದಿಲ್ಲ ಎಂಬತ್ತೆ,ಎರಡು ಬಣದ ಕಾರ್ಯಕರ್ತರು ಹೊಡೆದಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದರು. ತನ್ನೆದುರಿಗೆ ಈ ರೀತಿಯ ಕಾರ್ಯಕರ್ತರ ಹೊಡೆದಾಟವನ್ನು ವೀಕ್ಷಣೆ ಮಾಡಿದ ಕುಮಾರಸ್ವಾಮಿರವರು ಪಕ್ಷದ ಎರಡು ಬಣದವರಿಗೂ ಬುದ್ದಿ ಮಾತುಗಳನ್ನು ಹೇಳಿ, ಎರಡು ಕಡೆಯವರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಬಿನ್ನಾಭಿಪ್ರಾಯಗಳನ್ನು ಬಗೆಹರಿಸುವುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss