Sunday, July 3, 2022

Latest Posts

ರಾಮನಗರ| ಡ್ರೋಣ್ ಮೂಲಕ ಸಾರ್ವಜನಿಕರ ಮನೆ, ಆಸ್ತಿ ಸರ್ವೆಗೆ ಸಿಇಒ ಚಾಲನೆ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಎಚ್.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುವಾಡಿ ಗ್ರಾಮದಲ್ಲಿ ಭೂ ಸಾಮಿತ್ವ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಡ್ರೋಣ್ ಮೂಲಕ ಸಾರ್ವಜನಿಕರ ಮನೆ, ಆಸ್ತಿ ಸರ್ವೆ ಮಾಡುವ ಕಾರ್ಯಕ್ಕೆ ತಾ.ಪಂ. ಇಒ ಚಂದ್ರು ಚಾಲನೆ ನೀಡಿದರು.

ಸಂದರ್ಭದಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಮನೆ, ಆಸ್ತಿಗಳನ್ನು ಡ್ರೋಣ್‌ಯಂತ್ರದ ಮೂಲಕ ಸರ್ವೆ ಮಾಡಿ ಭೂ ಸಾಮಿತ್ವಯೋಜನೆಗೆ ಒಳಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದೊಂದು ಉತ್ತಮಯೋಜನೆ, ಇದರಿಂದ ಗ್ರಾಮೀಣ ಜನತೆಗೆ ತುಂಬ ಅನುಕೂಲವಾಗಲಿದೆ. ಇ-ಖಾತೆ ಸುಲಭವಾಗಿ ಸಿಗುವುದರಿಂದ ಸಾಲಸೌಲಭ್ಯ ಪಡೆದುಕೊಳ್ಳಲು ಇದು ನೆರವಾಗಲಿದೆಎಂದರು. ಈ ಯೋಜನೆಯಡಿ ಪ್ರಾಥಮಿಕ ಹಂತದಲ್ಲಿ ತಾಲ್ಲೂಕಿನ ಹೆಚ್.ಬ್ಯಾಡರಹಳ್ಳಿ ಮತ್ತು ಸಿಂಗರಾಜಿಪುರ ಗ್ರಾಮ ಪಂಚಾಯಿತಿಗಳನ್ನು ಪಂಚಾಯಿತಿಗಳನ್ನು ಪೈಲೆಟ್ ಗ್ರಾ.ಪಂ.ಗಳೆಂದು ಆಯ್ಕೆ ಮಾಡಿಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮ, ಹಳ್ಳಿಗಳಲ್ಲಿನ ಜನರಮನೆ,ಆಸ್ತಿಯನ್ನು ಡ್ರೋಣ್‌ಯಂತ್ರದ ಮೂಲಕ ಸರ್ವೆ ಮಾಡಿ ಭೂ ಸಾಮಿತ್ವಯೋಜನೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದರು.

೧೨೦ ಅಡಿ ಎತ್ತರದಿಂದ ಸುಮಾರು ೧ ಗಂಟೆಅವಧಿಯಲ್ಲಿ ಸುಮಾರು ೧ ಸಾವಿರ ಮನೆಗಳು-ಆಸ್ತಿಯನ್ನು ಡ್ರೋಣ್ ಸರ್ವೆ ಮಾಡಿ, ತನ್ನ ಕ್ಯಾಮರದಲ್ಲಿ ಸೆರೆ ಹಿಡಿದು ನಿಖರವಾದ ಮಾಹಿತಿಯನ್ನು ನೀಡಲಿದೆ. ಇದರಿಂದ ಈಗಾಗಲೇ ಗ್ರಾಮ ಪಂಚಾಯಿತಿ ಭೌತಿಕವಾಗಿ ನಡೆಸಿರುವ ಮನೆ, ಆಸ್ತಿ ಸರ್ವೆಕಾರ್ಯ, ವಿಸ್ತೀರ್ಣವನ್ನು ಇದರೊಂದಿಗೆ ತುಲನೆ ಮಾಡಿ ಖಚಿತ ಪಡಿಸಿಕೊಂಡು  ಸರಿಪಡಿಸಲಾಗುವುದುಎಂದು ಹೇಳಿದರು.

ಈಗಾಗಲೇ ತಾಲ್ಲೂಕಿನ ೩೨ ಗ್ರಾಮ ಪಂಚಾಯಿತಿ ವತಿಯಿಂದತಮ್ಮತಮ್ಮಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನಪ್ರತಿಹಳ್ಳಿ, ಗ್ರಾಮಗಳಲ್ಲಿನ ಸಾರ್ವಜನಿಕರ ಮನೆ,ಆಸ್ತಿಗಳನ್ನು ಸರ್ವೆ ಮಾಡಿ, ಬಣ್ಣದಿಂದಗಡಿಯನ್ನುಗುರುತು ಮಾಡಲಾಗಿದೆ.ಡ್ರೋಣ್ ಮೂಲಕ ಮನೆ,ಆಸ್ತಿ ಸರ್ವೆ ಮಾಡುವ ವಿಚಾರವನ್ನುಗ್ರಾಮದಲ್ಲಿ ಪ್ರಚಾರ ಮಾಡಿಜನರಲ್ಲಿಅರಿವು ಮೂಡಿಸಲಾಗಿದೆ.

ಜನರಿಂದಲೂಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ,ಮುಂದಿನ ದಿನಗಳಲ್ಲಿ ತಾಲ್ಲೂಕಿನ ೩೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಡ್ರೋಣ್‌ಯಂತ್ರದ ಮೂಲಕ ಮನೆ,ಆಸ್ತಿ ಸರ್ವೆಕಾರ್ಯವನ್ನು ನಡೆಸಲಾಗುವುದುಎಂದು ತಿಳಿಸಿದರು. ಸಂದರ್ಭದಲ್ಲಿಅಧಿಕಾರಿಗಳಾದ ಮಹದೇವ ಸ್ವಾಮಿ, ಸೂರಜ್ ಮತ್ತುತಂಡ, ಭೂದಾಖಲೆ ವಿಭಾಗದ ಸಹಾಯಕ ನಿರ್ದೇಶಕ ಸಚ್ಚಿನ್ ಹಾಗೂ ಎಚ್.ಬ್ಯಾಡರಹಳ್ಳಿ ಪಿ.ಡಿ.ಓ.ಶ್ವೇತಾ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss