Monday, August 15, 2022

Latest Posts

ರಾಮನಗರ| ಪ್ರತ್ಯೇಕ 3 ಪ್ರಕರಣ: ಅಕ್ರಮ ದಾಸ್ತಾನಿದ್ದ ಒಟ್ಟು 88 ಕೆಜಿ ಗಾಂಜಾ ಪತ್ತೆ

ರಾಮನಗರ: ಅಕ್ರಮ ಗಾಂಜಾ ಮಾರಾಟ, ದಾಸ್ತಾನು, ಸಾಗಾಟದಲ್ಲಿ ತೊಡಗಿರುವವರ ವಿರುದ್ದ ಸಮರ ಸಾರಿರುವ ಜಿಲ್ಲಾ ಪೊಲೀಸರು ೩ ಪ್ರಕರಣಗಳಲ್ಲಿ ೮೮.೬೦೦ ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ರಾಮನಗರದಲ್ಲಿ ೨೧ ಕೆ.ಜಿ. ಗಾಂಜಾ ಜಪ್ತಿ:
ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು, ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ೨೧.೧೦೦ ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರ ಸಿಪಿಐ ನರಸಿಂಹಮೂರ್ತಿ ಅವರಿಗೆ ಬಂದ ಮಾಹಿತಿ ಮೇರೆಗೆ, ದಾಳಿ ನಡೆಸಿದ ಪೊಲೀಸರು, ಜಿಲ್ಲಾ ಕ್ರೀಡಾಂಗಣದ ಪಕ್ಕ ಹಾಜಿ ನಗರಕ್ಕೆ ಹೋಗುವ ರಸ್ತೆಯ ಬಳಿ ಆರೋಪಿಯನ್ನು ತಡೆದಿದ್ದಾರೆ. ೨ ಚೀಲಗಳಲ್ಲಿ ತುಂಬಿದ್ದ ೨೧.೧೦೦ ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದು ಆತನ ವಿರುದ್ಧ ಕೇಸು ದಾಖಲಿಸಿದ್ದಾರೆ. ಎಸ್ಪಿ ಎಸ್.ಗಿರೀಶ್ ಅವರ ನಿರ್ದೇಶನ, ಡಿವೈಎಸ್ಪಿ ಪುರುಷೋತ್ತಮ ಅವರ ನೇತೃ ತ್ವದಲ್ಲಿ ಸಿಪಿಐ ನರಸಿಂಹಮೂರ್ತಿ, ನಗರ ಠಾಣೆ ಪಿಎಸ್‌ಐ ಎಂ.ಹೇಮAತ್ ಕುಮಾರ್, ಐಜೂರು ಠಾಣೆ ಪಿಎಸ್‌ಐ ಶುಭಾಂಬಿಕ, ಸಿಬ್ಬಂದಿಗಳಾದ ಗೌರೀಶ್, ನಾಗರಾಜಯ್ಯ, ಹನುಮಂತೇಗೌಡ, ಚನ್ನಬಸಪ್ಪ, ಹನುಮಂತ, ಸಂತೋಷ್ ಕಾರ್ಯಾಚರಣೆಯಲ್ಲಿದ್ದರು. ತಾವರೆಕೆರೆ ಪೊಲೀಸರಿಂದ ೬೦ ಕೆ.ಜಿ. ವಶಕ್ಕೆ: ಜಿಲ್ಲೆಯ ಮಾಗಡಿ ತಾಲೂಕಿನ ಕಸಬಾ ಹೋಬಳಿ ಮಾಗಡಿ ಬೆಂಗಳೂರು ಮುಖ್ಯ ರಸ್ತೆ ಪಕ್ಕದ ಬಂಟಕುಪ್ಪೆಗೆ ಹೋಗುವ ರಸ್ತೆಯಲ್ಲಿ ತಗಚಗುಪ್ಪೆ ಮತ್ತು ಪೂಜಾರಹಟ್ಟಿ ಕಾಲೋನಿ ಬಳಿ ಅಕ್ರಮವಾಗಿ ಗಾಂಜಾ ಸೊಪುö್ಪ ಮಾರಾಟ ಮಾಡುತ್ತಿದ್ದ ೮ ಮಂದಿ ಆರೋಪಿಗಳನ್ನು ತಾವರೆಕರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ೬೦ ಕೆ.ಜಿ.ಗಾಂಜಾ, ಇನ್ನೋವಾ ಕಾರು, ಬೈಕ್, ೩ ಸಾವಿರ ನಗದು, ೩ ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಬೆಂಗಳೂರು ಉಲ್ಲಾಳನಗರದ ನಿವಾಸಿ ಕುಪ್ಪ, ಆಂಧ್ರ ಪ್ರದೇಶ ವಿಶಾಖಪಟ್ಟಣ ಕೋಡಿತಲ ಗ್ರಾಮದ ನಿವಾಸಿ ಪಾಂಗಿಪ್ರಸಾದ್, ಬೆಂಗಳೂರು ಮಂಜುನಾಥ ನಗರದ ಶಿವರಾಜ, ತಾವರೆಕೆರೆ ಹೋಬಳಿ ಹೊಸ ಪಾಳ್ಯದ ಶಂಕರ, ದೊಡ್ಡಾಲಮರ ಗ್ರಾಮದ ಮಂಜುನಾಥ, ಇದೇ ಹೋಬಳಿಯ ಕೇತೋಹಳ್ಳಿಯ ನವೀನ್ ಕುಮಾರ್, ತಾವರೆಕೆರೆ ಟೌನ್ ಶರತ್ ಕುಮಾರ್ ಮತ್ತು ಕಾರ್ತಿಕ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಹಾರೋಹಳ್ಳಿಯಲ್ಲಿ ೭ ಕೆ.ಜಿ.ಜಪ್ತಿ: ಜಿಲ್ಲೆಯ ಕನಕಪುರ ತಾಲೂಕು ಹಾರೋ ಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕದೇವರಹಳ್ಳಿ ಗ್ರಾಮದಲ್ಲಿ ೭.೬೦೦ ಕೆ.ಜಿ. ಗಾಂಜಾ ಶೇಖರಣೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಸಂಬAಧ ತನಿಖೆ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss