ರಾಮನಗರ:- ಅಪಘಾತಗೊಂಡು ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವ ವ್ಯಕ್ತಿ ವಿಶ್ವನಾಥ್ (೩೫) ಎಂದು ಹೇಳಲಾಗಿದ್ದು, ನಗರದ ಎಲೆಕೇರಿ ಗೆಂಡೆಮಡು ನಿವಾಸಿ ಲೇಟ್ ರಾಮೇಶ್ವರ ಎಂಬುವರ ಪುತ್ರನಾದ ಈತ ಕೆಲ ದಿನಗಳ ಹಿಂದೆ ತನ್ನ ಸಂಬ0ಧಿಕರ ದ್ವಿಚಕ್ರ ವಾಹನದಲ್ಲಿ ಬರುವಾಗ ಚಿಕ್ಕಮಗಳೂರು ಬಳಿ ಅಪಘಾತ ಸಂಭವಿಸಿತ್ತು.
ತಲೆಗೆ ಗಂಭೀರ ಪೆಟ್ಟಾಗಿ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದ ಆತನನ್ನು ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮೂರು ದಿನಗಳು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಪ್ರಕರಣದ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ನಿಮಾನ್ಸ್ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಮೃತನಿಗೆ ಮದುವೆಯಾಗಿದ್ದು ಪತ್ನಿ ತೀರಿ ಹೋಗಿದ್ದಾರೆ. ಹೂ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು