Sunday, June 26, 2022

Latest Posts

ರಾಮನಗರ: ಭಾರತೀಯ ಜೀವ ವಿಮಾ ನಿಗಮ ನೌಕರರ ಪ್ರತಿಭಟನೆ

ರಾಮನಗರ: ಭಾರತೀಯ ಜೀವ ವಿಮಾ ನಿಗಮದಲ್ಲಿನ ಪಾಲಿಸಿ ಶೇರು ಮಾರಾಟ ಮಾಡುತ್ತಿರುವ ಹಾಗೂ ಸಾರ್ವಜನಿಕ ವಲಯಗಳನ್ನು ವಿದೇಶಿ ಬಂಡವಾಳಗಾರರ ಒತ್ತಾಯಕ್ಕೆ ಮಣಿದು ಖಾಸಗೀಕರಣಗೊಳಿಸುತ್ತಿರುವ ಕೇಂದ್ರ ಸರ್ಕಾರದ ಅನೀತಿಯನ್ನು ಖಂಡಿಸಿ ನಗರದ ಭಾರತೀಯ ಜೀವ ವಿಮಾ ನಿಗಮದ ನೌಕರರು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದರು.

ಚಿಕ್ಕಮಳೂರು ಬಳಿಯ ಭಾರತೀಯ ಜೀವ ವಿಮಾ ನಿಗಮದಲ್ಲಿ ಕಳೆದ ಒಂದು ವಾರದಿಂದ ನೌಕರರು ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೇಂದ್ರ ಸರ್ಕಾರದ ಹಲವಾರು ರೀತಿಯ ದುಡುಕು ನಿರ್ಧಾರಗಳನ್ನು ಹಿಂತೆಗೆದುಕೊಳ್ಳುವ0ತೆ ಒತ್ತಾಯಿಸಿ, ಕಛೇರಿಯ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಕುಟುಂಬದವರೊಡಗೂಡಿ ತಮ್ಮ ನಿವೇದನೆಯನ್ನು ಹೊರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜೀವ ವಿಮಾ ನಿಗಮದ ನೌಕರರ ಸಂಘದ ಅಧ್ಯಕ್ಷ ನಾರಾಯಣ್, ಪ್ರಪಂಚದಲ್ಲಿಯೇ ನಂಬಿಕೆಗೆ ಮತ್ತೊಂದು ಹೆಸರಾಗಿರುವ ಭಾರತೀಯ ಜೀವ ವಿಮಾ ನಿಗಮ ಹೆಮ್ಮರವಾಗಿ ಬೆಳೆದು ಕೋಟ್ಯಾಂತರಿಗೆ ನೆರಳು ಕೊಡುತ್ತಿದೆ.

ಅದರ ರಂಬೆಗಳನ್ನು ಒಂದೊ0ದಾಗಿ ಕತ್ತರಿಸುತ್ತಿರುವುದು ಮುಂದಿನ ದಿನಗಳಲ್ಲಿ ಭಾರಿ ಗಂಡಾAತರ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಪಂಚದಲ್ಲಿ ಕೋಟ್ಯಾಂತರ ಮಂದಿ ವಿದ್ಯಾವಂತ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟಿರುವ ಹಾಗೂ ಕೋಟ್ಯಾಂತರ ಮಂದಿಗೆ ಉದ್ಯೋಗ ನೀಡಿರುವ ಹಾಗೂ ೪೦ ಕೋಟಿಗೂ ಹೆಚ್ಚು ಪಾಲಿಸಿದಾರರ ಭವಿಷ್ಯಕ್ಕೆ ಭದ್ರತೆಯಾಗಿರುವ ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗೀಕರಣ ಮಾಡಲು ಪಿ.ಪಿ.ಒ ಪ್ರಕ್ರಿಯೆ ಯನ್ನು ಪ್ರಾರಂಭ ಮಾಡಿರುವ ಕೇಂದ್ರ ಸರ್ಕಾರ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಕೆಂದರು.

ಕಾರ್ಯದರ್ಶಿ ಸಮಮ್ ಅನ್ಸಾರಿ ಮಾತನಾಡಿ, ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲು ಹಲವಾರು ರೀತಿಯ ಅನೀತಿ ಕ್ರಮಗಳಿಗೆ ಮುಂದಾಗಿದೆ. ಪ್ರಪಂಚದಲ್ಲಿ ತನ್ನದೇ ಆದ ನಂಬಿಕೆಯಿ0ದ ಸೇವಾ ಕಾರ್ಯವನ್ನು ಮಾಡುತ್ತಿರುವ ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗೀಕರಣ ಮಾಡುತ್ತಿರುವುದು ಭಾರಿ ದುರಂತದ ವಿಚಾರವಾಗಿದೆ ಎಂದರು.

ಎಲ್ಲಾ ಸಂಸದರು ದೇಶದ ಪ್ರಧಾನಿಗೆ ಮನವರಿಕೆ ಮಾಡಿಕೊಟ್ರು, ಖಾಸಗೀಕರಣಕ್ಕೊಳಗಾಗಿ ಮಾಡಿಸಲಾಗಿದ್ದ ಮಂದಿಗೆ ಅನ್ಯಾಯವಾಗುವ ಭಾರತೀಯ ಜೀವ ವಿಮಾ ನಿಗಮ ಅದರ ಕರ್ತವ್ಯ ಪಾಲನೆಗೆ ಬಿಡಬೇಕೆಂದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಶಿವಕುಮಾರ್, ಶ್ರೀನಿವಾಸ್, ವೀಣಾ ಸಾಮಾಂತ್, ಗಿರಿಜಾ, ಮಂಜುನಾಥ್ ಹಾಗೂ ಹಲವಾರು ಮಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss