Tuesday, August 16, 2022

Latest Posts

ರಾಮನಗರ: ಮಾಸ್ಕ್ ಧರಿಸದ ಪ್ರೌಢಶಾಲಾ ವಿದ್ಯಾರ್ಥಿಗಳು

ಹೊಸದಿಗಂತ ವರದಿ ರಾಮನಗರ: 

ತಾಲ್ಲೂಕಿನ ಹೊಂಗನೂರು ಪ್ರೌಢಶಾಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸದೇ ಶಾಲೆ ಬಿಟ್ಟೊಡನೆ ರಸ್ತೆಯಲ್ಲಿ ಸಹಪಾಠಿಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳದೆ ನಡೆದು ಮನೆಕಡೆ ಹೊರಟಿದ್ದ ದೃಶ್ಯ ಕಂಡುಬAದಿದೆ. ಕಳೆದ ಒಂದು ವರ್ಷದಿಂದ ಕೊರೊನಾ ಸಾಂಕ್ರಾಮಿಕ ರೋಗವನ್ನ ಹತೋಟಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಸಹ ಪಡುವುದರ ಜೊತೆಗೆ ಸಾಕಷ್ಟು ಆರ್ಥಿಕ ಸಂಕಷ್ಟ ವನ್ನ ಎದುರಿಸಿವೆ.
ಜೊತೆಗೆ ದೇಶದಲ್ಲಿ ಸಾವಿರಾರು ಸಾವುನೋವುಗಳು ಸಂಭವಿಸಿವೆ ಅನೇಕ ಕೊರೊನಾ ವಾರಿಯರ್‌ಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಇನ್ನೂ ಮೂರು ಕೊಟಿ ಕೊರೊನಾ ವಾರಿಯರ್‌ಗಳು ತಮ್ಮ ಕುಟುಂಬದಿAದ ದೂರ ಉಳಿದು ತಮ್ಮ ಪ್ರಾಣ ಒತ್ತೆಇಟ್ಟು ಕೊರೊನಾ ಮಹಾ ಮಾರಿಯ ವಿರುದ್ಧ ಯುದ್ಧ ನಡೆಸುತ್ತಲೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ತಡೆಗಟ್ಟಲು “ಮಾಸ್ಕ್ ಧರಿಸುವಿಕೆ ,ದೈಹಿಕ ಅಂತರ ಕಾಪಾಡಿಕೊಳ್ಳುವಿಕೆ ಆಗಾಗ್ಗೆ ಕೈ ತೊಳೆದು ಕೊಳ್ಳುವಿಕೆ ಸ್ಯಾನಿಟೈಸರ್ ಬಳಕೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನ ಪ್ರತಿಯೊಂದು ಮೊಬೈಲ್ ರಿಂಗ್ ಟೋನ್ ಮೂಲಕ ಜೊತೆಗೆ ಆರೋಗ್ಯ ಇಲಾಖೆ ಒಳಗೊಂಡAತೆ ಇತರೇ ಸಂಘ ಸಂಸ್ಥೆಗಳ ಮೂಲಕ ಮಾದ್ಯಮಗಳ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುತ್ತಾ ಬರುತ್ತಿದೆ. ಅದರಲ್ಲೂ ಶಾಲಾ ,ಕಾಲೇಜು ಗಳ ಶಿಕ್ಷಕರ ಮತ್ತು ಮಕ್ಕಳ ಆರೋಗ್ಯ ದ ಹಿತದೃಷ್ಟಿಯಿಂದ ಕಳೆದ ಒಂದು ವರ್ಷದಿಂದ ಶಾಲೆ ,ಕಾಲೇಜು ತರಗತಿಗಳನ್ನ ಮುಚ್ಚುವ ಮೂಲಕ ಕೊರೊನಾ ಮಹಾಮಾರಿಯ ಕದಂಬ ಬಾಹುಗಳಿಂದ ಇವರನ್ನ ರಕ್ಷಿಸಲು ಸಾಕಷ್ಷು ಸೂಕ್ತ ರೀತಿಯ ಆನ್ ಲೈನ್ ಶಿಕ್ಷಣಕ್ಕೆ ಮುಂದಾಗಿ ಸಾಕಷ್ಟು ಗರಿಷ್ಠ ಪ್ರಮಾಣದ ಶ್ರಮವಹಿಸಿದೆ. ಅದರಲ್ಲೂ ವಿದ್ಯಾಗಮ ಪ್ರಾರಂಬ ಮಾಡಿದ ನಂತರವೂ ಅನೇಕ ಶಿಕ್ಷರು ಕೊರೊನಾ ಗೆ ಬಲಿಯಾಗಿದ್ದಾರೆ. ಅದರಲ್ಲೂ ಶಾಲೆ ಪ್ರಾರಂಬ ಮಾಡಬೇಕೆ ,ಬೇಡವೆ ಎಂಬ ಹತ್ತಾರು ಚರ್ಚೆಗಳು ,ರ ನಡೆದ ನಂತರ ಕೆಲವು ಕೋವಿಡ್ ನಿಯಂತ್ರಣ ನಿಯಮಗಳನ್ನ ತಪ್ಪದೇ ಪರಿಪಾಲಿಸಲು ಮಾರ್ಗಸೂಚಿಗಳನ್ನು ನೀಡಿದ ನಂತರ ಶಾಲೆ ಜನವರಿ ಒಂದರಿAದ ಪ್ರಾರಂಭಗೊAಡ ನಂತರ ಕೆಲವು ಕಡೆ ಪಾಸಿಟೀವ್ ಪ್ರಕರಣಗಳು ದೃಡ ಪಟ್ಟ ಹಿನ್ನೆಲೆಯಲ್ಲಿ ಅಂತಹ ಶಾಲೆಗಳನ್ನ ಲಾಕ್ ಡೌನ್ ಮಾಡಿಸ ಲಾಗುತ್ತಿದೆ. ಇಷ್ಟೆಲ್ಲಾ ಹೀನಾಯ ಪರಿಸ್ಥಿತಿ ಇದ್ದಾಗ್ಯೂ ತಾಲ್ಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ,”ಮಾಸ್ಕ್” ಗೆ ವಿಆರ್ ಡೋಂಟ್ ಕೇರ್ ಎಂಬAತೆ ಶಾಲೆ ಮುಗಿದೊಡನೆ ಮಾಸ್ಕ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳದೆ ರಸ್ತೆಯಲ್ಲಿ ವಿರಾಜಮಾನವಾಗಿ ಮನೆಗೆ ತೆರಳುತ್ತಿದ್ದ ದೃಶ್ಯಗಳನ್ನು ನೊಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನ ಕ್ಕೆ ಶಿರ ಬಾಗದ ಇವರು ಮುಂದಿನ ದಿನಗಳಲ್ಲಿ ಯಾವರೀತಿಯ ಪ್ರಜೆಗಳಾಗಿ ಮಾರ್ಪಾಡಾಗುತ್ತಾರೆ?! ಎಂಬ ಸಂಶಯ ಮೂಡದೆ ಇರದು ಪ್ರಜ್ಞಾ ವಂತ ನಾಗರೀಕರಿಗೆ.
ಶಿಕ್ಷಕರ ತಪ್ಪಿಲ್ಲ: ಸರ್ಕಾರಿ ಶಾಲೆಯ ಶಿಕ್ಷಕರು ಕೊರೊನಾ ವಿಚಾರ ದಲ್ಲಿ ತಮ್ಮ ತಮ್ಮ ಶಾಲೆಯ ಮಕ್ಕಳನ್ನು ಕೊರೊನಾ ದಿಂದ ದೂರ ಇಡಲು ತರಗತಿ ಯ ಒಳಗಡೆ ಅದೆಷ್ಟೋ ಬಾರಿ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಮಾರ್ಗ ದರ್ಶನ ನೀಡಿರುತ್ತಾರೆ , ಹಲವು ಶಾಲೆಗಳಲ್ಲಿ ನಾನೇ ಖುದ್ದು ಬೇಟಿನೀಡಿ ಪರಿಶೀಲನೆ ಮಾಡಿದ್ದೇನೆ ತರಗತಿಯ ಒಳಗೆ ಶಿಕ್ಷಕರ ಮಾರ್ಗದರ್ಶನ ದ ಭಯದಲ್ಲಿ ಮಾಸ್ಕ್ ಬಳಸಿ ತರಗತಿ ಬಿಟ್ಟ ನಂತರ ಕೆಲವರು ಮಾಸ್ಕ್ ಗಳನ್ನ ಜೇಬಿನಲ್ಲಿ ಇರಿಸಿ ಕೊಂಡು ಹೊರಡುವ, ಬರೇ ಗಡ್ಡಕ್ಕೆ ಸಿಕ್ಕಿಸಿ ಕೊಳ್ಳುವ, ಬ್ಯಾಗಿನಲ್ಲಿ ಇರಿಸಿಕೊಂಡು ದೈಹಿಕ ಅಂತರ ಕಾಪಾಡಿಕೊಳ್ಳದೆ ರಸ್ತೆಯಲ್ಲಿ ವಿರಾಜಮಾನದಿಂದ ತೆರಳುವುದನ್ನ ಕಂಡರೆ ಕೆಲ ಸೋಂಕಿತ ನಾಗರೀಕರ ಕೆಮ್ಮು ,ಸೀನು ಗಳಿಂದ ಶಾಲಾ ಮಕ್ಕಳಿಗೆ ಹರಡುವ ಸಾದ್ಯತೆ ಗಳನ್ನ ಅಲ್ಲಗಳೆಯುವಂತಿಲ್ಲ.
ಪೋಷಕರ ಜವಾಬ್ದಾರಿ: ಸದರಿ ಈ ವಿಚಾರದಲ್ಲಿ ಮೊದಲು ಪೋಷಕ ವರ್ಗದವರು ತಾವು ಸ್ವತಃ ಮಾಸ್ಕ್ ಬಳಕೆ ಮತ್ತು ಸ್ನೇಹಿತರಿಂದ ದೈಹಿಕ ಅಂತರ ಕಾಪಾಡಿಕೊಂಡು ಅದೇ ರೀತಿಯಲ್ಲಿ ಮನೆಯಲ್ಲಿ ಮಕ್ಕಳಿಗೆ ನಮ್ಮಂತೆಯೇ ನೀವು ಬಳಕೆ ಮಾಡಿ ಎಂದು ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ ಇಲ್ಲ ವಾದಲ್ಲಿ ಮಕ್ಕಳು ನಮ್ಮ ಅಪ್ಪನೇ ಬಳಸುತ್ತಿಲ್ಲ ನಾನ್ಯಾಕೆ ಬಳಸಬೇಕು ಎಂಬ ನಕಾರಾತ್ಮಕ ಮನೋಭಾವ ನೆ ಮಕ್ಕಳ ಲ್ಲಿ ಮೂಡದೇ ಇರಲಾರದು. ಆದ್ದರಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿನ ಶಿಕ್ಷಕರು ಮಕ್ಕಳಿಗೆ ಸರ್ಕಾರದ ನಿಯಮಾನುಸಾರ ಶಿಕ್ಷಣ ನೀಡುತ್ತಾರೆ ಆದರೆ ಬಹುಮುಖ್ಯವಾಗಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅವಶ್ಯಕತೆ ಎಂದರೆ ಖಂಡಿತವಾಗಿ ಯೂ ತಪ್ಪಾಗಲಾರದು.
ಸರ್ಕಾರದ ತಪ್ಪಿಲ್ಲ: ಸರ್ಕಾರ ಮಕ್ಕಳ ಶಿಕ್ಷಣದ ಮತ್ತು ಅವರ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಕೊರೊನಾ ನಿಯಂತ್ರಣ ನಿಯಮಾವಳಿಗಳನ್ನು ತಪ್ಪದೇ ಪರಿಪಾಲನೇ ಮಾಡಿಸುವ ಮೂಲಕ ಶಾಲೆ ತೆರೆದಿದೆ. ಶಿಕ್ಷಣ ಇಲಾಖೆ ಕೂಡ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದೆ ಆದರೆ ಈ ಪ್ರೌಢಾವಸ್ಥೆಯ ಮಕ್ಕಳ ಉಡಾಫೆ ತನವನ್ನ ಪೋಷಕ ವರ್ಗ ಸರಿಪಡಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss