Wednesday, August 17, 2022

Latest Posts

ರಾಮನಗರ| ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಲ್ಲ : ಎಸ್ಪಿ ಗಿರೀಶ್ ಖಡಕ್ ಉತ್ತರ

ರಾಮನಗರ : ಒತ್ತಡಕ್ಕೆ ಮಣಿದು ಕಾನೂನು ವಿರುದ್ಧ ಯಾವುದೇ ಪ್ರಕರಣಗಳಿಗೆ ಯಾರದೇ ಒತ್ತಡಕ್ಕೂ ನಾನು ಬೆಂಬಲ ನೀಡುವುದಿಲ್ಲ ಎಂದು ನೂತನ ಎಸ್ಪಿ ಗಿರೀಶ್ ಅವರು ಹೇಳಿದ್ದಾರೆ. ಇಂದು ತಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಂದ ನಂತರ ಮೊದಲ ಪತ್ರಿಕಾಗೋಷ್ಠಿಯನ್ನು ಕುರಿತು ಅವರು ಮಾತನಾಡುತ್ತಿದ್ದರು.
“ ಮರಳು ಮತ್ತು ಅಕ್ರಮ ಪಿಲ್ಟರ್ ದಂದೆಯನ್ನು ತಡೆಗಟ್ಟುವುದು ಪೊಲೀಸ್ ಇಲಾಖೆಯನ್ನೇ ಅವಲಂಭಿಸುವುದಕ್ಕಿoತ ಸಂಬoಧಪಟ್ಟ ರೆವಿನ್ಯೂ ಮತ್ತು ಗಣಿಗಾರಿಕೆ ಇಲಾಖೆಯ ಜವಾಬ್ದಾರಿಯ ಇರುತ್ತದೆ. ಒಟ್ಟಾಗಿ ಕೆಲಸ ನಿರ್ವಹಿಸಿದರೆ ಇದನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ’. 2006 ರಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದಲ್ಲಿ ನನ್ನ ಪೊಲೀಸ್ ಜೀವನ ಆರಂಭ. ಆ ಪ್ರದೇಶವು ಸದಾ ನಕ್ಸಲ್‌ಪೀಡಿತವಾಗಿತ್ತು. ಆ ಸಂದರ್ಭದಲ್ಲಿ ನಾನು ಕರಾಳರಾತ್ರಿಯಲ್ಲಿ ಎಕೆ 47 ಗನ್ ಹಿಡಿದುಕೊಂಡು ನಕ್ಸಲ್ ಬೇಟೆಗಾಗಿ ಕಾಡು ಪ್ರಯಾಣ ಹೋಗುತ್ತಿದ್ದೆ. ಘಟ್ಟ ಪ್ರದೇಶದಲ್ಲಿ ಯಾವಾಗಲೂ ಕಷ್ಟಪಡುವ ಜನರೇ ಹೆಚ್ಚು ವಾಸ ಮಾಡುತ್ತಾರೆ. ಇಲ್ಲಿಂದ ಮುಂದೆ ಪಣಂಬೂರು, ಉಳ್ಳಾಲಗಳಲ್ಲಿ ಕೆಲಸ ಮಾಡಿದ ಉತ್ತಮ ಅನುಭವ. ಆ ನಂತರ ಭಾರತದ ಸರ್ವಶ್ರೇಷ್ಠ ಲೋಕಾಯುಕ್ತ ಎಂದೇ ಕೀರ್ತಿ ಗಳಿಸಿದ್ದ ಸಂತೋಷ್ ಹೆಗಡೆ ಅವರ ಜೊತೆ ಕೆಲಸ ಮಾಡಿದ ಹೆಗ್ಗಳಿಕೆ, ಬೆಂಗಳೂರಿನ ಪೂರ್ವ ಭಾಗದಲ್ಲಿ ಟ್ರಾಫಿಕ್ ವಿಭಾಗದಲ್ಲಿ ಡಿಸಿಪಿ ಆಗಿ ಕರ್ತವ್ಯ ನಿರ್ವಹಣೆ ಮಾಡಿರುವುದು ಸಮಾಧಾನ ತಂದಿದೆ. ಕಠಿಣ ಕಾನೂನು ಕ್ರಮಗಳ ನೆರವಿನಿಂದ ಅತ್ಯುತ್ತಮ ಎಸ್ಪಿ ಅನೂಪ್‌ಶೆಟ್ಟಿ ಅವರು ಜಿಲ್ಲೆಯಾದ್ಯಂತ ಅಕ್ರಮ ಇಸ್ಪೀಟ್, ಡ್ರಗ್ಸ್, ಫಿಲ್ಟರ್ ಮರಳು ದಂದೆಯನ್ನು ನಿಯಂತ್ರಣ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹಾದಿಯಲ್ಲೆ ನಾನೂ ಕೂಡ ಸಾಗುತ್ತೇನೆ. ಅಕ್ರಮ ಕಾನೂನು ವಿರುದ್ಧ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ನಿರ್ದಾಕ್ಷಿöಣ್ಯವಾಗಿ ಹತ್ತಿಕ್ಕಲಾಗುವುದು. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಾದ್ಯಂತ 91 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆದರೆ ನಾನು ಬಂದ ನಂತರ 15 ದಿನಗಳಲ್ಲಿ 100 ಕೆ.ಜಿ. ಗಾಂಜಾ ವಶಪಡಿಸಿಕೊಂಡು ಆರೋಪಿಗಳಿಗೆ ಬಿಸಿ ಮುಟ್ಟಿಸಲಾಗಿದೆ ಎಂದರು. ಇತ್ತೀಚೆಗೆ ರಾಜ್ಯದಾದ್ಯಂತ ಡ್ರಗ್ಸ್ ಹಗರಣದಿಂದಾಗಿ ಜನತೆ ತಲ್ಲಣಗೊಂಡಿದ್ದಾರೆ. ಆದುದರಿಂದ ನಾವು ರಾಮನಗರ ಜಿಲ್ಲೆಯಲ್ಲಿ ನಡೆಯುವ ಗಾಂಜಾ, ಡ್ರಗ್ಸ್ಗಳ ಮಾರಾಟಗಾರರನ್ನು ಬಂಧಿಸುವುದೇ ಅಲ್ಲದೇ ಮೂಲದಿಂದ ಗಾಂಜಾ ಸರಬರಾಜು ಮಾಡುವ ಜಿಲ್ಲೆಯಿಂದ ಹೊರಗೆ ಹೋಗಿ ನಮ್ಮ ಅಧಿಕಾರಿಗಳು ಸರ್ಜಿಕಲ್ ಸ್ಟೆಕ್ ರೀತಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡುತ್ತೇನೆ. ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಹೆಚ್ಚಿನ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸರಗಳ್ಳತನ, ಕಳ್ಳತನಗಳಲ್ಲಿ ತೊಡಗಿಕೊಳ್ಳುವ ಕ್ರಿಮಿನಲ್‌ಗಳ ಬಗ್ಗೆ ನಮ್ಮ ಇಲಾಖೆ ಸದಾ ಜಾಗೃತವಾಗಿರುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಹೊಯ್ಸಳ ಮಾದರಿಯಲ್ಲಿ ಪೊಲೀಸ್ ಸಹಾಯವಾಣಿ ೧೧೨ ಕ್ಕೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಕ್ರೈಂ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಜರಾಗುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರು ದೂರು ನೀಡಲು ಪೊಲೀಸ್ ಠಾಣೆಗೆ ಎಡತಾಗುವುದು ತಪ್ಪುತ್ತದೆ. ಸಾಮಾಜಿಕ ತಾಣಗಳಾದ ರಾಮನಗರ ಫೇಸ್‌ಬುಕ್ -ಟ್ವಿಟರ್‌ಗಳಲ್ಲಿ ಸಾರ್ವಜನಿಕರು ದೂರು ನೀಡಬಹುದು ಎಂದು ತಿಳಿಸಿದರು.
ಬಿ.ಎಂ. ರಸ್ತೆಯಲ್ಲಿರುವ ರೆಸಾರ್ಟ್ಗಳು ರಾತ್ರಿ ೧೨ ರಿಂದ ಬೆಳಿಗಿನ ಜಾವದವರೆಗೂ ಕೆಲಸ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಸಮಯಕ್ಕೆ ಸರಿಯಾಗಿ ಇನ್ನು ಮುಂದೆ 11 ಗಂಟೆಯೊಳಗೆ ರೆಸಾರ್ಟ್ ಮುಚ್ಚಬೇಕು. ದೂರುದಾರರು ಇನ್ನು ಮುಂದೆ ಗಂಭೀರ ವಿಷಯಗಳಿಗಾಗಿ ಎಸ್ಪಿ ಮಟ್ಟದ ಕಛೇರಿಗೆ ಬರಬೇಕು. ಉಳಿದಂತೆ ಆಯಾ ಸಬ್ ಇನ್ಸ್ಪೆಕ್ಟರ್, ಸರ್ಕಲ್‌ಇನ್ಸ್ಪೆಕ್ಟರ್, ಡಿವೈಎಸ್ಪಿ
ಮಟ್ಟದ ಅಧಿಕಾರಿಗಳಲ್ಲಿಯೇ ದೂರು ದಾಖಲಿಸಬೇಕು. ಗೋಷ್ಠಿಯಲ್ಲಿ ಸಿಬ್ಬಂದಿವರ್ಗ ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!