Monday, August 8, 2022

Latest Posts

ರಾಮನಗರ| ರಾಮಮಂದಿರ ನಿಧಿ ಸಮರ್ಪಣಾ ಕಚೇರಿ ಉದ್ಘಾಟನೆ

ಹೊಸದಿಗಂತ ವರದಿ,ರಾಮನಗರ:

ನಗರದ 5ನೇ ಅಡ್ಡರಸ್ತೆಯಲ್ಲಿ ರಾಮಜನ್ಮಭೂಮಿ ತೀರ್ಥ ಟ್ರಸ್ಟ್ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕಚೇರಿಯನ್ನು ಆರಂಭಿಸಲಾಯಿತು.

ನೂತನ ಕಚೇರಿಯನ್ನು ಆರ್‌ಎಸ್‌ಎಸ್ ನಗರ ಕಾರ್ಯನಿರ್ವಾಹಕ ಹಾಗೂ ನಿಧಿ ಸಂಗ್ರಹಣಾ ಪ್ರಮುಖ ನಿರಂಜನ್ ಮತ್ತು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಜಿಲ್ಲಾ ಪ್ರಮುಖ್ ಎಂ.ಎನ್. ಆನಂದಸ್ವಾಮಿ ಆರಂಭ ಗೊಳಿಸಿದರು. ಈ ವೇಳೆ ಮಾತನಾಡಿದ ಈ ಇಬ್ಬರು ಮುಖಂಡರು ತಾಲೂಕಿನಲ್ಲಿ ನಿಧಿ ಸಮರ್ಪಣಾ ಕಾರ್ಯ ಯಶಸ್ವಿಯಾಗಿ ನಡೆಯಲಿ, ಕಾರ್ಯಕರ್ತರು ಈ ಮಹತ್ಕಾರ್ಯಕ್ಕೆ ಅರ್ಪಣಾ ಮನೋಭಾವದಿಂದ ತೊಡಗಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ಪದಾಧಿಕಾರಿಗಳಾದ ಸುರೇಶ್ ರೆಡ್ಡಿ, ಚೇತನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss