Wednesday, August 17, 2022

Latest Posts

ರಾಮನಗರ| ರೇಷ್ಮೆ ಕೃಷಿ ಅಧಿಕಾರಿ ಮಂಜುನಾಥ್ ವರ್ಗಾವಣೆ

ಹೊಸದಿಗಂತ ವರದಿ,ರಾಮನಗರ:

ಕಳೆದ ನಾಲ್ಕು ವರ್ಷಗಳಿಂದ ರೇಷ್ಮೆ ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ್ ಅವರು ಎಚ್.ಡಿ.ಕೋಟೆಗೆ ವರ್ಗಾವಣೆ ಗೊಂಡಿದ್ದು, ಇವರನ್ನು ಇಲಾಖೆಯ ಸಿಬ್ಬಂದಿಗಳು ಬೀಳ್ಕೊಟ್ಟರು.

ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇವರನ್ನು ಬೀಳ್ಕೊಟ್ಟ ಕಚೇರಿ ಸಿಬ್ಬಂದಿಗಳು, ತಾಲೂಕಿನಲ್ಲಿ ರೇಷ್ಮೆ ಕೃಷಿ ನಿರ್ದೇಶಕರಾಗಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಲು ಸಹಕಾರ ನೀಡುವ ಜತೆಗೆ ರೈತರಿಗೆ ಸಾಕಷ್ಟು ಯೋಜನೆಗಳನ್ನು ತಲುಪಿಸುವಲ್ಲಿ ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.

ತಾಲೂಕು ರೇಷ್ಮೆ ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಮಂಜುನಾಥ್ ಅವರು, ಇಗ್ಗಲೂರಿನಲ್ಲಿ 30 ಎಕರೆ ವಿಸ್ತೀರ್ಣದಲ್ಲಿದ್ದ ಇದ್ದ ರೇಷ್ಮೆ ಪಾರಂ ಸಾಕಷ್ಟು ಒತ್ತುವರಿಯಾಗಿ ಕೇವಲ 7 ಎಕರೆಯಷ್ಟು ಮಾತ್ರ ಉಳಿದಿತ್ತು. ಇದನ್ನು ಸರ್ವೇಮಾಡಿಸಿ ಜಾಗವನ್ನು ಮತ್ತೆ ಇಲಾಖೆಗೆ ಪಡೆದಿದ್ದು ಇವರ ಸಾಧನೆಯಾಗಿದೆ.

ಇನ್ನು ಗ್ರಾಮೀಣ ಭಾಗದ ರೇಷ್ಮೆ ಕೃಷಿ ವಿಸ್ತರಣಾ ಕೇಂದ್ರಗಳನ್ನು ಚುರುಕು ಗೊಳಿಸಿದ್ದು, ಹೊಂಗನೂರು ಮತ್ತು ಕೋಡಂಬಹಳ್ಳಿ ಭಾಗದಲ್ಲಿ ಹಳತಾಗಿದ್ದ ರೇಷ್ಮೆ ವಿಸ್ತರಣಾ ಕೇಂದ್ರಗಳನ್ನು ಸುಸಜ್ಜಿತ ಕಟ್ಟಡಕ್ಕೆ ವರ್ಗಾಯಿಸಿ ಕಾರ್ಯನಿರ್ವಹಿಸುವಂತೆ ಮಾಡಿದ್ದು, ನರೇಗಾ ಯೋಜನೆಯಡಿ ರೇಷ್ಮೆ ಇಲಾಖೆ ವತಿಯಿಂದ ಅತಿಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಿ ೧೩೭೦೦೦ ಮಾನವದಿನ ಸೃಷ್ಟಿಸಿ ಹೆಚ್ಚು ರೈತರಿಗೆ ನೆರವಾಗಿದ್ದು ಸೇರಿದಂತೆ ಹಲವಾರು ಕೆಲಸಗಳು ಇವರ ಅವಧಿಯಲ್ಲಿ ನಡೆದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!