Friday, July 1, 2022

Latest Posts

ರಾಮನಗರ| ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ

ರಾಮನಗರ: ನಿಸ್ವಾರ್ಥ ಮನೋಭಾವದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಲು ರೋಟರಿ ಸಂಸ್ಥೆ ಅನುವು ಮಾಡಿಕೊಡುತ್ತದೆ ಎಂದು ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರೋ.ಕರೀಗೌಡ. ಬಿ ಅಭಿಪ್ರಾಯಪಟ್ಟರು.

ಬಿಡದಿಯಲ್ಲಿ ಗುರುವಾರ ನಡೆದ ೨೦೨೦-೨೧ ನೇ ಸಾಲಿನ ರೋಟರಿ ಬಿಡದಿ ಸೆಂಟ್ರಲ್‌ನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಂತರ ರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಸುಮಾರು ೧೨.೫ಲಕ್ಷ ಸೇವಾಯೋಧರು ಸ್ವಾರ್ಥ ರಹಿತ ಸಮಾಜ ಕಾರ್ಯದಲ್ಲಿ ನಿರತರಾಗಿದ್ದು, ಸಮಾಜದಲ್ಲಿ ಹಿಂದುಳಿದವರಿಗೆ ನೆರವಾಗಿ, ಅವರಲ್ಲಿ ಭರವಸೆ ಮೂಡಿಸಿ ನೆರವು ನೀಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ. ಸೇವೆಯಲ್ಲಿ ಅವಕಾಶಗಳನ್ನು ಭದ್ರ ಮಾಡಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವ ಜೊತೆಗೆ ಇತರರಿಗೂ ನಾಯಕತ್ವ ರೂಪಿಸಿ, ರೋಟರಿ ಸೇವೆಯಲ್ಲಿ ಪ್ರತಿನಿಧಿಸುವ ಅವಕಾಶಗಳನ್ನು ಕಟ್ಟಿಕೊಟ್ಟಿದೆ ಎಂದರು.

ದೇಶದಲ್ಲಿ ಪೋಲೀಯೋ ನಿರ್ಮೂಲನಾ ಕಾರ್ಯದಲ್ಲಿ ರೋಟೆರಿಯನ್‌ಗಳ ನೆರವು ಸ್ಮರಣೀಯವಾಗಿದೆ. ಅದರಂತೆ ಪರಿಸರ ಕಾಳಜಿಯಿಂದ ಕೋಟಿನಾಟಿ ಯೋಜನೆ. ಕಾಮದೇನು, ಕಲ್ಪವೃಕ್ಷ, ರಕ್ತಸಂಗ್ರಹದAತಹ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಿ ರೋಟರಿ ಬಿಡದಿ ಸೆಂಟ್ರಲ್‌ಗೆ ಜಿಲ್ಲೆಯಲ್ಲಿ ಉತ್ತಮ ಹೆಸರಿದ್ದು, ಟಾಪ್‌ಒನ್ ಕ್ಲಬ್ ಆಗಿ ಹೊರ ಹೊಮ್ಮಲಿ ಎಂದು ಆಶಿಸಿದರು.

ನೂತನ ಅಧ್ಯಕ್ಷ ರೋ.ರೇಣುಕಪ್ಪ ಬಿ.ಎಂ ಮಾತನಾಡಿ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಸ್ವಚ್ಚತಾ ಕಾರ್ಯಕ್ರಮ ಮತ್ತು ಸಾರ್ವಜನಿಕರಲ್ಲಿ ಕೋವಿಡ್-೧೯ ಬಗ್ಗೆ ಜಾಗೃತಿ ಮೂಡಿಸುವ ಸಮಾಜಮುಖಿ ಕಾರ್ಯಗಳನ್ನು ಎಲ್ಲರ ಸಹಕಾರದಿಂದ ಅನುಷ್ಠಾನ ಮಾಡಲು ಶ್ರಮಿಸುವುದಾಗಿ ಹೇಳಿದರು.

ರೋಟರಿ ಕುಟುಂಬಕ್ಕೆ ಶಶಿಕಲಾ.ಕೆ, ಮಂಗಳಾ, ಡಾ.ಲೋಕೇಶ್, ಉಮೇಶ್ ಮತ್ತು ಸಿದ್ದರಾಜು ಸೇರ್ಪಡೆಗೊಂಡರು. ಸಹಾಯಕ ಜಿಲ್ಲಾಪಾಲಕ ರೋ.ಬಿ.ಎಂ.ನಾಗೇಶ್, ಕಾರ್ಯದರ್ಶಿ ಬಿ.ಎಂ.ವಸಂತ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಜಿ.ಕೃಷ್ಣ, ಮಾಜಿ ಅಧ್ಯಕ್ಷರುಗಳಾದ ರೋ.ಚಿಕ್ಕಣ್ಣಯ್ಯ, ರೋ.ಮಲ್ಲೇಶ್, ರೋ.ಜಿ.ಗೋವಿಂದಯ್ಯ, ರೋ. ಶಿವಣ್ಣ ರೋ. ಬಿ.ಎಂ.ರಮೇಶ್‌ಕುಮಾರ್, ರೋ.ಲೋಕೇಶ್, ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss