Tuesday, August 9, 2022

Latest Posts

ರಾಮನಗರ| ವಿಕಲಚೇತನರಿಗೆ ಸ್ಮಾಟ್ ಕಾರ್ಡ್ ವಿತರಣೆ

ಹೊಸದಿಗಂತ ವರದಿ,ರಾಮನಗರ:

ಪ್ರತಿಯೊಬ್ಬ ವಿಕಲಚೇತನರು, ಸರ್ಕಾರದಿಂದ ಸಿಗುವ ಹಲವಾರು ರೀತಿಯ ಪ್ರಯೋಜನಗಳನ್ನು ಸರ್ಕಾರ ನೀಡುವ ಗುರುತಿನ ಪತ್ರದಿಂದ ಪಡೆಯಬಹುದೆಂದು, ತಾಲ್ಲೂಕು ಪಂಚಾಯ್ತಿಯ ಸಹಾಯಕ ನಿರ್ದೇಶಕ ಲೋಕೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ, ಕಾರ್ಡ್ ವಿತರಣೆ ಮಾಡಿ ಮಾತನಾಡಿದರು.

ಸರ್ಕಾರ ಹಿಂದೆ ವಿಕಲಚೇತನರ ಉಪಯೋಗಕ್ಕಾಗಿ ವಿಕಲಚೇತನರ ಬುಕ್ ಗಳನ್ನು ನೀಡಲಾಗಿತ್ತು, ಆದರೆ ವಿಕಲಚೇತನರಿಗೆ ಬುಕ್‌ನಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾದ ಪರಿಣಾಮ, ಸರ್ಕಾರದ ಚಿಂತನೆಯ ಫಲವಾಗಿ, ವಿಕಲಚೇತನರಿಗೆ ಶಾಶ್ವತವಾಗಿ ಯುಡಿಐಡಿ ಕಾರ್ಡ್ ಅಂದರೆ, ಪಾಕ್‌ಕಾರ್ಡ್ ಅಳತೆಯನ್ನು ಹೋಲುವ ಕಾರ್ಡ್ ಗಳನ್ನು ನೀಡುತ್ತಿರುವುದರಿಂದ, ವಿಕಲಚೇತನರಿಗೆ ಭಾರಿ ಅನುಕೂಲವಾಗಲಿದೆ ಎಂದರು.

ಎಂ.ಆರ್,ಡಬ್ಲ್ಯೂ ಚಿಕ್ಕಮಳೂರಯ್ಯ ಮಾತನಾಡಿ ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಯುಡಿಐಡಿ ಕಾರ್ಡ್ ವಿತರಣೆ ಮಾಡುತ್ತಿದೆ, ಈಗಾಗಲೇ ನಗರ ಹಾಗೂ ತಾಲ್ಲೂಕಿನಲ್ಲಿ 800ಕಾರ್ಡ್ ಗಳನ್ನು ನೀಡಲಾಗಿದ್ದು, ಇನ್ನು ಸುಮಾರು ಒಂದು ಸಾವಿರ ಕಾರ್ಡ್ಗಳು ಬರಬೇಕಾಗಿದೆ, ಅಲ್ಲದೆ ಸಾಕಷ್ಟು ವಿಕಲಚೇತನರು ಆದಷ್ಟು ಬೇಗ ಯುಡಿಐಡಿ ಕಾರ್ಡ್ ಗಳನ್ನು ಸಂಬoಧಿಸಿದ ಸೈಬರ್‌ಗಳಲ್ಲಿ, ಸೂಕ್ತ ದಾಖಲೆಗಳೊಂದಿಗೆ ಮಾಡಿಸಿ ಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಕೇಂದ್ರದ ಸಹಾಯವಾಣಿಯ ಅಧಿಕಾರಿ ರಾಜಕುಮಾರ್, ವಿ.ಆರ್. ಡಬ್ಲ್ಯೂಗಳಾದ ಸುಣ್ಣಘಟ್ಟದ ಶ್ರೀಧರ್, ಜೆ ಬ್ಯಾಡರಳ್ಳಿ ಸುರೇಶ್ ಗೌಡ, ಸಾದರಹಳ್ಳಿ ಮಹದೇವ್, ಚನ್ನಪಟ್ಟಣ ನಗರದ ಯುಆರ್ ಡಬ್ಲ್ಯೂಗಳಾದ ಶ್ಯಾಮ್, ರಘು ವೈ.ಎಸ್ ವಿರುಪಾಕ್ಷಿಪುರದ ಶಬರೀಶ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss