Wednesday, August 17, 2022

Latest Posts

ರಾಮನಗರ: ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಬಸ್ ಸಂಚಾರ ಆರಂಭ

ರಾಮನಗರ: ಕೋವಿಡ್-19 ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಕನಕಪುರ-ರಾಮನಗರ-ಆದಿಚುಂಚನಗಿರಿ ಮಾರ್ಗದ ಬಸ್ ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಎಂ. ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 3 ತಿಂಗಳಿAದ ಲಾಕ್‌ಡೌನ್ ಕಾರಣದಿಂದಾಗಿ ಸದರಿ ಮಾರ್ಗದ ಬಸ್ ಸಂಚಾರ ನಿಷೇಧಿಸಲಾಗಿತ್ತು, ಶ್ರೀಮಠದ ಭಕ್ತರು, ಸಾರ್ವಜನಿಕರ ಮನವಿಯ ಮೇರೆಗೆ ಶನಿವಾರದಿಂದ ಮತ್ತೆ ಪುನರಾರಂಭ ಮಾಡಿದ್ದು, ಪ್ರತಿದಿನ ಕನಕಪುರ ಬಸ್ ನಿಲ್ದಾಣದಿಂದ ಬೆಳಿಗ್ಗೆ 8-30ಕ್ಕೆ ಹೊರಡುವ ಬಸ್ ರಾಮನಗರ, (ಬೆಳಿಗ್ಗೆ 9-30) ಮಾಗಡಿ (ಬೆಳಿಗ್ಗೆ 10-45) ಕುಣಿಗಲ್ (ಬೆಳಿಗ್ಗೆ 11-10) ಎಡಿಯೂರು (ಬೆಳಿಗ್ಗೆ 11-30) ಆದಿಚುಂಚನಗಿರಿಗೆ ಮದ್ಯಾಹ್ನ 12 ಗಂಟೆಗೆ ತಲುಪಲಿದೆ. ಮದ್ಯಾಹ್ನ 2 ಗಂಟೆಗೆ ಆದಿಚುಂಚನಗಿರಿಯಿAದ ಹೊರಟು ಬಸ್ ಎಡಿಯೂರು (2-30ಕ್ಕೆ), ಕುಣಿಗಲ್ (3-00ಕ್ಕೆ), ಮಾಗಡಿ (3-45ಕ್ಕೆ), ರಾಮನಗರಕ್ಕೆ ಸಂಜೆ 4-45ಕ್ಕೆ ವಾಪಸ್ಸಾಗಲಿದೆ ಎಂದು ಅವರು ತಿಳಿಸಿದರು.

ಪುರಾಣ ಪ್ರಸಿದ್ದ ಕ್ಷೇತ್ರವಾಗಿರುವ ಆದಿಚುಂಚನಗಿರಿ ಕ್ಷೇತ್ರಕ್ಕೆ ಹೋಗುವ ಪ್ರಯಾಣಿಕರು ಪೂಜೆ ಮುಗಿಸಿ, ಪ್ರಸಾದ ಸ್ವೀಕರಿಸಿ ವಾಪಸ್ಸು ಆದೇ ವಾಹನದಲ್ಲಿ ಹಿಂತಿರುಗಿ ಬರಲು ತಾತ್ಕಾಲಿಕ ಸಮಯ ನಿಗಧಿ ಮಾಡಲಾಗಿದೆ. ಕೋವಿಡ್-19 ಸಂಕಷ್ಟ ಸಮಯ ಕಳೆದ ನಂತರ ಮುಂದಿನ ದಿನಗಳಲ್ಲಿ ಈ ಹಿಂದೆ ಇದ್ದ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದು ಹೇಳೀದರು.

ಕನಕಪುರದಿಂದ ಕುಣಿಗಲ್, ಯಡಿಯೂರು, ಆದಿಚುಂಚನಗಿರಿ ಸೇರಿದಂತೆ ಹಾಸನ, ತುಮಕೂರಿಗೆ ಹೋಗುವ ಪ್ರಯಾಣಿಕರಿಗೆ ಈ ಬಸ್ ಸಂಚಾರ ಅನುಕೂಲವಾಗಲಿದ್ದು, ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಸ್ ನಲ್ಲಿ ಪ್ರಯಾಣಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!